ಇನ್ನು ಈ ವಿಡಿಯೊ ಗಮನಿಸಿದ್ದ ಬಿಬಿಎಂಪಿ ಅಧಿಕಾರಿಗಳು, ಕ್ಯಾಂಟೀನ್ ನಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದರು. ಹೇಮಂತ್ ಕುಮಾರ್ ಹಾಗೂ ಅವರ ಸ್ನೇಹಿತರೇ ಉದ್ದೇಶಪೂರ್ವಕವಾಗಿ ತಿಂಡಿಯಲ್ಲಿ ಜಿರಳೆ ಹಾಕಿದ್ದು ಕಂಡುಬಂದಿದೆ ಎನ್ನಲಾಗಿದ್ದು, ಅದೇ ದೃಶ್ಯಗಳನ್ನು ಆಧರಿಸಿ ಕ್ಯಾಂಟೀನ್‌ಗಳ ನೋಡಲ್ ಅಧಿಕಾರಿ ನಂಜುಂಡಪ್ಪ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.