ಬನ್ನೇರುಘಟ್ಟ: ಬೆಂಗಾಲ್ ಟೈಗರ್ಸ್ ದಾಳಿಗೆ ಬಿಳಿ ಹುಲಿ ಸಾವು; ವಿಡಿಯೋ ವೈರಲ್

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಬೆಂಗಾಲ್ ಟೈಗರ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಮೃತಪಟ್ಟಿದೆ...
ಹುಲಿಗಳ ಕಾದಾಟ
ಹುಲಿಗಳ ಕಾದಾಟ
ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಬೆಂಗಾಲ್ ಟೈಗರ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಿಳಿ ಹುಲಿ ಮೃತಪಟ್ಟಿದೆ. 
9 ವರ್ಷದ ಬಿಳಿ ಹುಲಿ ಶ್ರೇಯಸ್ ಮೇಲೆ ಮೂರು ಬೆಂಗಾಲ್ ಹುಲಿಗಳು ನಿರಂತರವಾಗಿ ಕಾದಾಟ ನಡೆಸುತ್ತಿದ್ದವು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಬಾರಿ ಕಾದಾಟ ನಡೆದಾಗ ಬಿಳಿ ಹುಲಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. 
ದಾಳಿಯಲ್ಲಿ ಮತ್ತೊಂದು ಬಿಳಿ ಹುಲಿ ಅಮರ್ ಸಹ ಗಾಯಗೊಂಡಿತ್ತು. ಇದೀಗ ಸಹ ಚೇತರಿಕೆ ಕಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com