ಆನ್‌ಲೈನ್‌ಗೆ ಮಾಜಿ ಗೆಳತಿಯ ನಗ್ನ ಫೋಟೋ ಅಪ್‌ಲೋಡ್: ಬೆಂಗಳೂರು ವಿದ್ಯಾರ್ಥಿ ಬಂಧನ

ಮಾಜಿ ಗೆಳತಿಯ ನಗ್ನ ಫೋಟೋಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದ್ದ 2ನೇ ವರ್ಷದ ಬಿಬಿಎಂ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಾಜಿ ಗೆಳತಿಯ ನಗ್ನ ಫೋಟೋಗಳನ್ನು ಆನ್‌ಲೈನ್‌ಗೆ ಅಪ್‌ಲೋಡ್ ಮಾಡಿದ್ದ 2ನೇ ವರ್ಷದ ಬಿಬಿಎಂ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಬಂಧಿತ ವಿದ್ಯಾರ್ಥಿಯನ್ನು 22 ವರ್ಷದ ಶೋವಿಕ್ ಭವನ್ ಎಂದು ಗುರುತಿಸಲಾಗಿದ್ದು ಇತ ಬೆಂಗಳೂರಿನಲ್ಲಿ ಎರಡನೇ ವರ್ಷದ ಮ್ಯಾನೆಜ್ಮೆಂಟ್ ಕೋರ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದ. ಇತ ಮಾಜಿ ಗೆಳತಿಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದು ಅದರ ಕೆಳಗೆ ಆಕೆಯ ಮೊಬೈಲ್ ನಂಬರ್ ಸಹ ಹಾಕಿ ಈಕೆ ವೇಶ್ಯೆ ಯಾರುಬೇಕಾದರೂ ಸಂಪರ್ಕಿಸಬಹುದು ಎಂದು ಬರೆದಿದ್ದಾನೆ. 
ವಿದ್ಯಾರ್ಥಿನಿಯು ಅಸ್ಸಾಂನ ಮೂಲದವಳಾಗಿದ್ದು ತೇಜ್ ಪುರ್ ನಲ್ಲಿ ಆಕೆಯ ನಗ್ನ ಚಿತ್ರಗಳು ವೈರಲ್ ಆಗಿದ್ದವು. ಇದನ್ನು ಕಂಡ ಆಕೆಯ ಸ್ನೇಹಿತರು ಆಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದೇ ಅಲ್ಲದೆ ಆಕೆಯ ಮೊಬೈಲ್ ನಂಬರ್ ಗೆ ಕೆಲವರು ಕರೆ ಮಾಡಿ ರೇಟ್ ಎಷ್ಟು ಎಂದು ಕೇಳಿದ್ದಾರೆ. ಇದರಿಂದ ನೊಂದ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. 
ಸಂತ್ರಸ್ತ ಯುವತಿ ಮುಂಬೈ ಮೂಲದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ದೂರು ನೀಡಿದ ಒಂದು ತಿಂಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com