ಬೆಂಗಳೂರು: ರಬ್ಬರ್ ಬಲೂನ್ ನುಂಗಿ 2 ವರ್ಷದ ಬಾಲಕ ಸಾವು

ಮನೆಯ ಬಳಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಆಕಸ್ಮಾತ್ ಬಲೂನ್ ನುಂಗಿ ಸಾವನ್ನಪ್ಪಿರುವ ಘಟನೆ ನಗರದ ಹುಳಿಮಾವಿನ ಬಳಿಯ ಕಮ್ಮನಹಳ್ಳಿಯಲ್ಲಿ ನಡೆದಿದೆ. ...ಕ
ಮೃತ ಬಾಲಕ ನವಾಜ್
ಮೃತ ಬಾಲಕ ನವಾಜ್
ಬೆಂಗಳೂರು: ಮನೆಯ ಬಳಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಆಕಸ್ಮಾತ್ ಬಲೂನ್ ನುಂಗಿ ಸಾವನ್ನಪ್ಪಿರುವ ಘಟನೆ ನಗರದ ಹುಳಿಮಾವಿನ ಬಳಿಯ ಕಮ್ಮನಹಳ್ಳಿಯಲ್ಲಿ ನಡೆದಿದೆ. 
ಎರಡು ವರ್ಷದ ನವಾಜ್ ಬಲೂನ್ ನುಂಗಿ ಸಾವನ್ನಪ್ಪಿದ ರ್ದುದೈವಿ  ಬೆಳಗ್ಗೆ 9.30 ರ ವೇಳೆ ಮನೆ ಬಳಿ ಆಟವಾಡುತ್ತಿದ್ದ. ಈ ವೇಳೆ ಗಾಳಿ ತುಂಬಿದ್ದ ಬಲೂನ್ ಒಡೆದು ಹೋಗಿದೆ, ಆ ಬಲೂನ್ ನ್ನು  ನವಾಜ್ ನುಂಗಿ ಪ್ರಜ್ಞಾಹೀನಾನಾಗಿ ಬಿದ್ದಿದ್ದಾನೆ. ಆತನ ತಾಯಿ ರೇಷ್ಮಾ ಅಡುಗೆ ಮನೆಯಲ್ಲಿದ್ದರು. 
ಉಸಿರಾಟದ ತೊಂದರೆ ಎದುರಿಸಿದ್ದ ಆತನನ್ನು ಪೋಷಕರು  ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದ್ಯೊದಿದ್ದರು. ಆದರೆ ಮಗುವನ್ನ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು. 
ನಂತರ ಮೃತದೇಹವನ್ನು ವಿಕ್ಟೋರಿಯಾ ಆಸ್ರತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದರು, ಸಂಜೆ ವೇಳೆ ಬಾಲಕನ ಅಂತ್ಯಕ್ರಿಯೆ ನಡೆಸಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com