ಇನ್ನು @nimmaupendra ಉಪೇಂದ್ರ ಪಕ್ಷ ಸ್ಥಾಪನೆ ಮಾಡಿದ್ದರೂ ಕೂಡ ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಮುಕ್ತಾಯವಾಗಿದ್ದು, ಈಗೇನಿದ್ದರೂ ನಟ ಉಪೇಂದ್ರ ಪಕ್ಷ ಸಂಘಟನೆಗೆ ಮಾತ್ರ ಒತ್ತು ನೀಡಬೇಕಿದೆ. ಹೊಸ ಪಕ್ಷ ಆರಂಭಿಸಲಿರುವ ಉಪೇಂದ್ರ, ಪಕ್ಷ ಸಂಘಟನೆಯ ಚಟುವಟಿಕೆಗೆ ಮುಂದಾಗಬೇಕಿದೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂಬ ಕಾರಣಕ್ಕೆ ಉಪೇಂದ್ರ ಅವರೊಂದಿಗೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಮುನಿಸಿಕೊಂಡಿದ್ದರು. ಈಗ ತಮ್ಮದೇ ಪಕ್ಷ ಸ್ಥಾಪಿಸುತ್ತಿರುವ ಉಪ್ಪಿ, ಮುಂದೆ ಪಕ್ಷವನ್ನು ಹೇಗೆ ಕಟ್ಟುತ್ತಾರೆ ಎಂಬುದು ಮುಂದಿರುವ ಕುತೂಹಲ.