ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ ನಡೆದಿದೆ.
ಜೆಪಿನಗರ 2ನೇ ಹಂತದ ಕಮಲ, ಅನಿಲ್ ಮತ್ತು ಅನಿಲ್ ಪುತ್ರ ಆದಿತ್ಯ ಮೃತರು, ಮನೆಯ ಪಕ್ಕದಲ್ಲೇ ಅನಿಲ್ ಎಲೆಕ್ಕ್ರಿಕಲ್ ಅಂಗಡಿ ನಡೆಸುತ್ತಿದ್ದರು, ಆದಿತ್ಯ ಕುಮಾರ ಸ್ವಾಮಿ ಲೇಔಟ್ ನ ಕಾಲೇಜೊಂದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ.
ಬೆಳಗ್ಗೆ 8.30ರ ಸುಮಾರಿಗೆ ಅಪಘಾತ ನಡೆದಿದ್ದು, ಆಂಧ್ರ ಪ್ರದೇಶದಿಂದ ಅವರು ವಾಪಾಸಗುತ್ತಿದ್ದರು, ತಮಿಳುನಾಡು ನೋಂದಣಿಯ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ,.ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಲಾರಿ ಚಾಲಕನ ವಿರುದ್ಧ ಕೇಸ್ ದಾಖಲಿಸದ ಪೊಲೀಸರು ಮೃತ ಅನಿಲ್ ವಿರುದ್ಧ ಆಜಾಗರೂಕತೆ ಚಾಲನೆ ಎಂದು ಕೇಸ್ ದಾಖಲಿಸಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ಅನಿಲ್ ತಮ್ಮ ತಾಯಿಯ ಅಸ್ತಮಾ ಕಾಯಿಲೆಗಾಗಿ ಆಯುರ್ವೇದ ಚಿಕಿತ್ಸೆಗಾಗಿ ಆಂಧ್ರಪ್ರದೇಶಕ್ಕಾಗಿ ಕರೆದೊಯ್ದಿದ್ದರು, ಬೆಳಗ್ಗೆ ಆರು ಗಂಟೆಗೆ ಅವರು ಜೆಪಿನಗರದ ಮನೆಯಿಂದ ಹೊರಟಿದ್ದರು ಎಂದು ಮೃತಪರ ಸಂಬಂಧಿ ಮಂಜುನಾಥ್ ಹೇಳಿದ್ದಾರೆ.
ಅಪಘಾತವಾದ ನಂತರ ನನಗೆ ಮಾಹಿತಿ ಬಂದಿತ್ತು,. ಹೀಗಾಗಿ ಸ್ಥಳಕ್ಕೆ ಧಾವಿಸಿಬಂದೆ, ಲಾರಿ ಚಾಲನಕ ವಿರುದ್ಧ ಕೇಸ್ ದಾಖಲಿಸುವ ಬದಲು ಮೃತ ಅನಿಲ್ ವಿರುದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ