ಉನ್ನತ ಶಿಕ್ಷಣ ಸಂಸ್ಥೆಗಳು ಹೆಚ್ಚು ಇರುವುದು ಬೆಂಗಳೂರಿನಲ್ಲಿ; ಸಮೀಕ್ಷೆ ವರದಿ

ಅಖಿಲ ಭಾರತ ಉನ್ನತ ಶಿಕ್ಷಣ ಸಂಸ್ಥೆ ಪಟ್ಟಿ(AISHE) ಸಮೀಕ್ಷೆಯಲ್ಲಿ ಸತತ ಮೂರನೇ ವರ್ಷ ಬೆಂಗಳೂರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಖಿಲ ಭಾರತ ಉನ್ನತ ಶಿಕ್ಷಣ ಸಂಸ್ಥೆಗಳ(AISHE) ಸಮೀಕ್ಷೆಯಲ್ಲಿ ಸತತ ಮೂರನೇ ವರ್ಷ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನ ಗಳಿಸಿದೆ. ಬೆಂಗಳೂರಿನಲ್ಲಿ ಅಧಿಕ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಕಾಲೇಜುಗಳಿವೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಜುಲೈ 31ರಂದು 2017-18ನೇ ಸಾಲಿನ ಸಮೀಕ್ಷೆಯನ್ನು ಬಿಡುಗಡೆ ಮಾಡಿದೆ. ಸಮೀಕ್ಷೆಯ ವರದಿ ಪ್ರಕಾರ, ಭಾರತದಲ್ಲಿ ಬೆಂಗಳೂರು ನಗರದಲ್ಲಿ ಹೆಚ್ಚು ಅತ್ಯುನ್ನತ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳು ಇವೆ. ಇಲ್ಲಿ ಒಟ್ಟು 893 ಕಾಲೇಜುಗಳಿದ್ದು ನಂತರ ಜೈಪುರದಲ್ಲಿ 558, ಹೈದರಾಬಾದ್ ನಲ್ಲಿ 472 ಮತ್ತು ರಂಗಾರೆಡ್ಡಿ ಜಿಲ್ಲೆಯಲ್ಲಿ 343 ಕಾಲೇಜುಗಳಿವೆ.

ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನ ಗಳಿಸಿದ್ದರೂ ಸಹ ಕಾಲೇಜುಗಳ ಸಂಖ್ಯೆ ಕಡಿಮೆಯಾಗಿದೆ. ಆಯಿಷ್ ವರದಿ ಪ್ರಕಾರ, 2016-17ನೇ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು ನಗರದಲ್ಲಿ 1,025 ಕಾಲೇಜುಗಳಿದ್ದವು. 2015-16ರಲ್ಲಿ 970, 2017-18ರಲ್ಲಿ 132 ಕಾಲೇಜುಗಳು ಕಡಿಮೆಯಾದವು. 2016-17ರಲ್ಲಿ ಕಾಲೇಜುಗಳ ಸಂಖ್ಯೆ 893 ಆದವು.

ಕರ್ನಾಟಕಕ್ಕೆ ಮೂರನೇ ಸ್ಥಾನ: ಭಾರತದಲ್ಲಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕಾಲೇಜುಗಳ ಸಂಖ್ಯೆ ನೋಡಿದರೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳ ನಂತರ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ರಾಜಸ್ತಾನ, ಆಂಧ್ರ ಪ್ರದೇಶ, ತಮಿಳುನಾಡು, ಗುಜರಾತ್ ಮತ್ತು ಮಧ್ಯ ಪ್ರದೇಶಗಳಿವೆ.

ಪ್ರತಿ ಲಕ್ಷ ಜನಸಂಖ್ಯೆಗೆ ಸರಾಸರಿ 28 ಕಾಲೇಜುಗಳು ಇರುವುದಕ್ಕಿಂತ ಹೆಚ್ಚು ಕಾಲೇಜುಗಳು 8 ರಾಜ್ಯಗಳಲ್ಲಿವೆ. ಉತ್ತರ ಪ್ರದೇಶದಲ್ಲಿ 6,922 ಕಾಲೇಜುಗಳು, ಮಹಾರಾಷ್ಟ್ರದಲ್ಲಿ 4,314 ಕಾಲೇಜುಗಳು ಇವೆ. ಅವುಗಳಲ್ಲಿ 33 ಕಾಲೇಜುಗಳು ಪ್ರತಿ ಲಕ್ಷ ಜನಸಂಖ್ಯೆಗೆ ಇವೆ. ಕರ್ನಾಟಕದಲ್ಲಿ 3,593 ಕಾಲೇಜುಗಳಿದ್ದು 51 ಕಾಲೇಜುಗಳು ಪ್ರತಿ ಲಕ್ಷ ಜನಸಂಖ್ಯೆಗೆ ಇವೆ. ರಾಜಸ್ತಾನ ನಾಲ್ಕನೇ ಸ್ಥಾನ ಹೊಂದಿದ್ದು ಇಲ್ಲಿ 2,957 ಕಾಲೇಜುಗಳಿದ್ದು 33 ಕಾಲೇಜುಗಳು ಪ್ರತಿ ಲಕ್ಷ ಜನಸಂಖ್ಯೆಗೆ ಇವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com