ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಚಿಕ್ಕಬಾಣಾವರದ ಅರ್ಪಿತಾ (24 ವರ್ಷ), ಪವನ್ ಕುಮಾರ್ (25 ವರ್ಷ) ಮತ್ತು ಸಿದ್ದಾರ್ಥ (45 ವರ್ಷ) ಎಂದು ಗುರುತಿಸಲಾಗಿದೆ. ಈ ಪೈಕಿ ಸಿದ್ಧಾರ್ಥ ಆಟೋ ಚಾಲಕನಾಗಿದ್ದು, ಪವನ್ ವಾರ ಪತ್ರಿಕೆಯೊಂದರ ಅಪರಾಧ ವರದಿಗಾರನಾಗಿ ಕೆಲಸ ಮಾಡುತ್ತಿದ್ದನಂತೆ. ಆರೋಪಿಗಳು ಫೇಸ್ಬುಕ್ ನಲ್ಲಿ ಅರ್ಪಿತಾಳ ಡಿಫರೆಂಟ್ ಫೋಟೋವನ್ನು ಅಪ್ ಲೋಡ್ ಮಾಡಿ ಬಳಿಕ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ಸ್ನೇಹ ಬೆಳೆಸಿಕೊಂಡು ಮೊಬೈಲ್ ನಂಬರ್ ತೆಗೆದುಕೊಂಡು ಪರಿಚಯವಾದವರೊಂದಿಗೆ ಆರ್ಪಿತಾ 'ಆತ್ಮೀಯವಾಗಿ' ಸಮಯ ಕಳೆಯುತ್ತಿದ್ದರು.