ಕೊಡಗು ಪ್ರವಾಹದ ಕುರಿತು ಕೇಂದ್ರಕ್ಕೆ 2 ದಿನಗಳಲ್ಲಿ ವರದಿ ಸಲ್ಲಿಸಲಿರುವ ರಾಜ್ಯ ಸರ್ಕಾರ

ಕೊಡಗು ಮತ್ತು ಇತರ ಜಿಲ್ಲೆಗಳ ಪ್ರವಾಹದಿಂದ ಆದ ನಷ್ಟದ ಬಗ್ಗೆ ಮಾಹಿತಿಗಳನ್ನು ರಾಜ್ಯಸರ್ಕಾರಿ ...
ಇಲಾಖೆ ಅಧಿಕಾರಿಗಳು ಮತ್ತು ಸಚಿವರುಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಇಲಾಖೆ ಅಧಿಕಾರಿಗಳು ಮತ್ತು ಸಚಿವರುಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
Updated on: 

ಬೆಂಗಳೂರು: ಕೊಡಗು ಮತ್ತು ಇತರ ಜಿಲ್ಲೆಗಳ ಪ್ರವಾಹದಿಂದ ಆದ ನಷ್ಟದ ಬಗ್ಗೆ ಮಾಹಿತಿಗಳನ್ನು ರಾಜ್ಯಸರ್ಕಾರಿ ಅಧಿಕಾರಿಗಳು ಕಲೆಹಾಕುತ್ತಿದ್ದು ಈ ಸಂಬಂಧ ವಿಸ್ತ್ರೃತ ವರದಿಯನ್ನು ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಹಣಕಾಸಿನ ನೆರವನ್ನು ಕರ್ನಾಟಕ ಸರ್ಕಾರ ಕೋರಲಿದೆ.

ಈ ಕುರಿತು ನಿನ್ನೆ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಭೆ ನಡೆಸಿದರು. ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಕೈಗೊಂಡಿರುವ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಪ್ರಾಥಮಿಕ ಅಧ್ಯಯನ ಪ್ರಕಾರ, ರಸ್ತೆಗಳ ಅಭಿವೃದ್ಧಿಗೆ ಸುಮಾರು 3 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಬೇಕಾಗಿದೆ. ದುರಸ್ತಿಯಲ್ಲಿ 2,225 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು, 240 ಸೇತುವೆಗಳ ಪುನರ್ ನಿರ್ಮಾಣ ಮತ್ತು 65 ಸರ್ಕಾರಿ ಕಟ್ಟಡಗಳ ಪುನರ್ ನಿರ್ಮಾಣ ಒಳಗೊಂಡಿವೆ. ಪ್ರವಾಹ ಪೀಡಿತ ಜಿಲ್ಲೆಗೆ ಸಂಪರ್ಕ ಕಲ್ಪಿಸುವುದು ರಾಜ್ಯ ಸರ್ಕಾರದ ಮುಂದಿರುವ ಬಹುದೊಡ್ಡ ಸವಾಲಾಗಿದೆ.

ಬೆಳೆ ನಾಶ ಮತ್ತು ಪ್ರವಾಹ ಪೀಡಿತ ಗ್ರಾಮಗಳನ್ನು ಪುನರ್ ನಿರ್ಮಾಣ ಮಾಡಿ ಒಂದು ಮಾದರಿ ಗ್ರಾಮಗಳನ್ನಾಗಿ ಅಭಿವೃದ್ಧಿಪಡಿಸಲು ವಿಸ್ತಾರವಾದ ವರದಿಯನ್ನು ತಯಾರಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.

ಈ ಮಧ್ಯೆ ವಸತಿ ಖಾತೆ ಸಚಿವ ಯುಟಿ ಖಾದರ್ ಸುದ್ದಿಗಾರರೊಂದಿಗೆ ಮಾತನಾಡಿ, ಕೊಡಗಿನಲ್ಲಿ ಸುಮಾರು 758 ಮನೆಗಳು ಹಾನಿಯಾಗಿದ್ದು ಜಿಲ್ಲಾಡಳಿತ ವಿವಿಧ ಕಡೆಗಳಲ್ಲಿ 42 ಎಕರೆ ಜಮೀನನ್ನು ಕಟ್ಟಡ ನಿರ್ಮಿಸಲು ಗುರುತಿಸಿದೆ. ಅವುಗಳಲ್ಲಿ 24 ಎಕರೆಗಳಲ್ಲಿ ಭೂಮಿಯ ಸಮೀಕ್ಷೆ ಮುಗಿದಿದೆ. ಪ್ರವಾಹದಲ್ಲಿ ಭಾಗಶಃ ಹಾನಿಗೀಡಾಗಿರುವ ಮನೆಗಳ ರಿಪೇರಿಗೆ ಇಲಾಖೆ ಹಣಕಾಸಿನ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com