ಮಂಗಳೂರು: ಸೊಂಟಕ್ಕೆ ಹಾಕುವ ಬೆಲ್ಟ್ ನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರ ಬಂಧನ

ವಿಮಾನ ಹಾಗೂ ರೈಲು ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು, 1 ಕೋಟಿ ರು. ಮೌಲ್ಯದ ಚಿನ್ನ ...
ಬೆಲ್ಟ್ ಮೂಲಕ ಸಾಗಿಸುತ್ತಿದ್ದ ಚಿನ್ನ
ಬೆಲ್ಟ್ ಮೂಲಕ ಸಾಗಿಸುತ್ತಿದ್ದ ಚಿನ್ನ
ಮಂಗಳೂರು: ವಿಮಾನ ಹಾಗೂ ರೈಲು ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು, 1 ಕೋಟಿ ರು. ಮೌಲ್ಯದ ಚಿನ್ನ ವಶ ಪಡಿಸಿಕೊಂಡಿದ್ದಾರೆ.
ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಯಲದ ಅಧಿಕಾರಿಗಳು  ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಒಟ್ಟು 1.22 ಕೋಟಿ ರೂ. ಮೌಲ್ಯದ 2.13 ಕೆ.ಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಕೇರಳದ ಕಾಸರಗೋಡಿನ ಹಸ್ಸನ್ ಮತ್ತು ಸಮೀರ  ಬಂಧಿತ ದಂಪತಿ. ಇವರು ಸೊಂಟಕ್ಕೆ ಹಾಕುವ ಬೆಲ್ಟ್ ನೊಳಗೆ ಸುಮಾರು 66 ಲಕ್ಷ ಮೌಲ್ಯದ 2.13 ಕೆಜಿ ಚಿನ್ನವನ್ನು ಜೋಡಿಸಿ ದುಬೈನಿಂದ ಸ್ಪೈಸ್  ಜೆಟ್ ವಿಮಾನದ ಮೂಲಕ ಆಗಮಿಸಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾಗಾಟಕ್ಕೆ ಯತ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com