ತಮಿಳುನಾಡಿನವನಾದ ಗೋವಿಂದರಾಜು ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದನು. ಕೊತ್ತನೂರಿನಲ್ಲಿ ವಾಸವಾಗಿದ್ದ ಈತ ಹೊಟೇಲ್‍ಗಳಲ್ಲಿ ದೋಸೆ ಅಥವಾ ಚಪಾತಿ ಪ್ಯಾಕ್ ಮಾಡುವ ರೀತಿಯಲ್ಲಿ ಗಾಂಜಾವನ್ನು ಪ್ಯಾಕ್ ಮಾಡಿ 1 ಪ್ಯಾಕೆಟ್ ಗೆ 200 ರಿಂದ 500 ರೂ.ಗಳಿಗೆ ಮಾರುತ್ತಿದ್ದ. ಬಂಧನದ ವೇಳೆ ಈತನಿಂದ ಈತನಿಂದ 70 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಈತನ ಹೇಳಿಕೆ ಅನುಸಾರ ಇನ್ನಿಬ್ಬರು ಆರೋಪಿಗಳಾದ ಬಸವರಾಜ್ ಮತ್ತು ಮಗೇಂದ್ರನನ್ನು ಬಂಧಿಸಲಾಗಿದೆ. ಅವರಿಂದ ಲೆಕ್ಟ್ರಾನಿಕ್ ತೂಕದ ಯಂತ್ರ, 3 ಮೊಬೈಲ್, 1 ಕಾರು, ಆಟೋರಿಕ್ಷಾ, 2 ಬೈಕ್‍ಗಳನ್ನು ಪಡೆಯಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಎಸಿಪಿ ರಮೇಶ್ ನೇತೃತ್ವದ ತಂಡ ಇವರನ್ನು ಬಂಧಿಸಿದೆ.