ಟಿಪ್ಪು ಜಯಂತಿ ಬಳಿಕ ಭುಗಿಲೆದ್ದ ಬಹುಮನಿ ಉತ್ಸವ ವಿವಾದ

ಟಿಪ್ಪು ಜಯಂಯಿ ಬಳಿಕ ರಾಜ್ಯದಲ್ಲಿ ಇದೀಗ ಬಹುಮನಿ ಸುಲ್ತಾನರ ಉತ್ಸವದ ವಿಚಾರವಾಗಿ ವಿವಾಗ ಭುಗಿಲೆದ್ದಿದೆ...
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Updated on: 
ಕಲಬುರಗಿ; ಟಿಪ್ಪು ಜಯಂಯಿ ಬಳಿಕ ರಾಜ್ಯದಲ್ಲಿ ಇದೀಗ ಬಹುಮನಿ ಸುಲ್ತಾನರ ಉತ್ಸವದ ವಿಚಾರವಾಗಿ ವಿವಾಗ ಭುಗಿಲೆದ್ದಿದೆ. 
ಹೈದರಾಬಾದ್ ಕರ್ನಾಟಕವನ್ನಾಳಿದ್ದ ಪ್ರಬಲ ರಾಜಮನೆತನದ ಬಹುಮನಿ ಸುಲ್ತಾನರ ಹೆಸರಲ್ಲಿ ಕಲಬುರಗಿಯಲ್ಲಿ ಸರ್ಕಾರ ಒಂದು ದಿನದ ಉತ್ಸವ ಆಚರಿಸಲು ಚಿಂತನೆ ನಡೆಸಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದೆ. 
ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣರಾದ ಬಹುಮನಿ ಸುಲ್ತಾನರ ಹೆಸರಲ್ಲಿ ಉತ್ಸವ ಆಚರಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಬಿಜೆಪಿ ಹೇಳಿದೆ. 
ಉತ್ಸವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು, ಉತ್ಸವ ನಡೆಸುವ ಕುರಿತು ಸಭೆಯೊಂದರಲ್ಲಿ ಚರ್ಚೆ ನಡೆಸಿರುವುದು ನಿಜ ಎಂದು ಹೇಳಿದ್ದಾರೆ. ಅಲ್ಲದೆ, ಉತ್ಸವಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ. 
2 ವಾರದ ಹಿಂದೆ ಕಲಬುರಗಿಯಲ್ಲಿ ನಡೆದ ಸಾಹಿತಿಗಳು, ಕಲಾವಿದರು, ವಿವಿಧ ಸಾಹಿತ್ಯ, ಸಾಂಸ್ಕೃತಿಕ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಳಖೇಡದಲ್ಲಿ ರಾಷ್ಟ್ರಕೂಟರ ಉತ್ಸವ ಮಾ.4 ಮತ್ತು 5 ರಂದು ಮಾ.6 ರಂದು ಕಲಬುರಗಿಯಲ್ಲಿ ಬಹುಮನಿ ಉತ್ಸವ ಆಚರಿಸಬೇಕು ಎಂಬ ಚರ್ಚೆಗಳೂ ಆಗಿವೆ. ಉತ್ಸವಕ್ಕೆ ಸಂಬಂಧಿಸಿದ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಇನ್ನೊಂದು ಸುತ್ತಿನ ಸಭೆಯಲ್ಲಿ ಉತ್ಸವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆಂದು ತಿಳಿಸಿದ್ದಾರೆ. 
ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಾಕಿರುವ ಅವರು, ಬಿಜೆಪಿ ನಾಯಕರು ನಾವು ಜಯಂತಿಯನ್ನು ಆಚರಿಸುತ್ತಿದ್ದೇವೆಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ನಾವು ಜಯಂತಿಯನ್ನು ಆಚರಿಸುತ್ತಿಲ್ಲ. ಉತ್ಸವವನ್ನು ಆಚರಿಸುತ್ತಿದ್ದೇವೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಹುಮನಿ ಉತ್ಸವಕ್ಕೆ ಬಿಜೆಪಿ ರಾಜಕೀಯ ಬಣ್ಣ ನೀಡಲು ಯತ್ನ ನಡೆಸುತ್ತಿದೆ. ಅವರಿಗೆ ತಲೆ ಸರಿಯಲ್ಲ ಎಂದಿದ್ದಾರೆ. 
ಬಹುಮನಿ ಉತ್ಸವಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಯವರು, ಬುಹಮನಿ ಸುಲ್ತಾನರು ಯಾರು? ಲಕ್ಷಾಂತರ ಹಿಂದುಗಳನ್ನು ಹತ್ಯೆ ಮಾಡಿದವರು ಯಾರು? ನೂರಾರು ಹಳ್ಳಿಗಳಿಗೆ ಬೆಂಕಿ ಹಚ್ಚಿದವರು ಯಾರು? ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದವರು ಯಾರು? ಹಿಂದು ದೇಗುಲಗಳನ್ನು ಧ್ವಂಸಗೊಳಿಸಿದವರು ಯಾರು...? ಇದೀಗ ಕಾಂಗ್ರೆಸ್ ನಾಯಕರು ಅಂತಹವರ ಉತ್ಸವವನ್ನು ಆಚರಿಸಲು ಮುಂದಾಗಿದೆ. ಇದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ಟ್ವೀಟ್ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com