ಈ ಹಿನ್ನಲೆಯಲ್ಲಿ ನಿನ್ನೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಹುಮನಿ ಉತ್ಸವ ಆಚರಣೆ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಸರ್ಕಾರದಿಂದ ಉತ್ಸವ ಆಚಱಣೆ ಮಾಡುವ ತೀರ್ಮಾನವನ್ನು ಕೈಗೊಂಡಿಲ್ಲ. ಬಹುಮನಿ ಉತ್ಸವಕ್ಕೆ ಅನುದಾನ ನೀಡಿದ್ದೇವೆಂಬುದು ಸುಳ್ಳು. ರಾಷ್ಟ್ರಕೂಟ ಉತ್ಸವಕ್ಕೆ ಮಾತ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರೂ.30 ಲಕ್ಷ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ.