

ಬೆಂಗಳೂರು: ಮೆಟ್ರೋ ಪ್ರಯಾಣಿಕರು ಇದೀಗ ಬೈಕ್ ನ್ನು ಬಾಡಿಗೆಗೆ ಪಡೆಯಬಹುದು. ಮೊದಲ ಹಂತದ 36 ನಿಲ್ದಾಣಗಳಲ್ಲಿ ಬೈಕ್ ಬಾಡಿಗೆ ವ್ಯವಸ್ಥೆಗೆ ಅವಕಾಶ ಮಾಡಲಾಗಿದೆ.
ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ನಿನ್ನೆಯಿಂದ ಈ ವ್ಯವಸ್ಥೆ ಜಾರಿಗೆ ಬಂದಿದೆ. 20ರಿಂದ 100 ಇಂತಹ ಬೈಕ್ ಗಳನ್ನು ಒದಗಿಸಲಾಗಿದೆ. ವಿದ್ಯುತ್ ಚಾಲಿತ ಬೈಕ್ ಮತ್ತು ಬೈಕ್ ಗಳು ಇದರಲ್ಲಿವೆ ಎಂದು ಬೈಕ್ ಕಂಪನಿ ತಿಳಿಸಿದೆ.
ಮೊಬೈಲ್ ಆಪ್ ಮೂಲಕ ಪ್ರಯಾಣಿಕರು ಬೈಕ್ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ನಂತರ ಕ್ಷೇತ್ರ ಸಂಪರ್ಕದ ಮೂಲಕ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಬೈಕ್ ಪಡೆಯಬಹುದಾಗಿದೆ . ನಂತರ ಪಾಸ್ ವರ್ಡ್ ಬಳಸಿ ಬೈಕ್ ಚಾಲನೆ ಮಾಡಬಹುದಾಗಿದೆ. ಕೊನೆಗೆ ಬೈಕ್ ಮೇಲಿನ ಬಟನ್ ಒತ್ತುವ ಮೂಲಕ ಬೈಕ್ ನ್ನು ನಿಲ್ಲಿಸಬಹುದಾಗಿದೆ.
1 ಕಿಲೋಮೀಟರ್ ಗೆ 5 ರೂ. ಒಂದು ನಿಮಿಷಕ್ಕೆ 50 ಪೈಸೆಯಂತೆ ಬೈಕ್ ದರ ನಿಗದಿಪಡಿಸಲಾಗಿದೆ. ಪ್ರಯಾಣಿಕರ ಖಾತೆಯಿಂದ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ,. ಇದರಿಂದಾಗಿ ದೂರದ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಿದಂತಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ. ಜೆ. ಜಾರ್ಜ್ ತಿಳಿಸಿದ್ದಾರೆ.