

ಬೆಳಗಾವಿ: ಮುಂಬೈ– ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಜನಾಶೀರ್ವಾದ ಯಾತ್ರೆಯ ಕೊನೆ ದಿನವಾದ ಇಂದು
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬೆಳಗಾವಿಯ ರಾಮದುರ್ಗದಲ್ಲಿನ ಗೋಡಚಿ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಆಶೀರ್ವಾದ ಪಡೆದರು.
ನಂತರ,ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ರಾಹುಲ್ ಹಾಗೂ ಸಿದ್ದರಾಮಯ್ಯ ಜಗ್ಗಲಿಗೆ ಬಾರಿಸಿದರು. ಇಬ್ಬರೂ ನಾಯಕರು ಜಗ್ಗಲಿಗೆ ಬಾರಿಸುತ್ತಿದ್ದರೆ ಸೇರಿದ್ದ ಕಾರ್ಯಕರ್ತರು ಘೋಷಣೆ ಕೂಗುತ್ತಾ ಹೆಜ್ಜೆ ಹಾಕಿದರು.
ನಂತರ ರಾಮದುರ್ಗದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನೋಟ್ ಅಮಾನ್ಯೀಕರಣದಿಂದ ಶ್ರೀಮಂತರು ಕಪ್ಪು ಹಣವನ್ನುಬಿಳಿ ಹಣವನ್ನಾಗಿ ಪರಿವರ್ತಿಸಿಕೊಂಡರು ಎಂದು ಆರೋಪಿಸಿದರು.