ಹೊಸ ವರ್ಷ ಆಚರಿಸಲೆಂದು ಹೊರ ಬಂದಿದ್ದ ಸಾಕಷ್ಟು ಮಂದಿ ಸಂಭ್ರಮದ ಬಳಿಕ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಲು ಸಾಧ್ಯವಾಗದೆ ರಸ್ತೆಗಳ ಮಧ್ಯೆಯೇ ಪರದಾಡುತ್ತಿದ್ದರು. ನಗರದಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಗಳು ದೊರಕದಿದ್ದ ಕಾರಣ ಜನರಿಗೆ ಸಮಸ್ಯೆ ಎದುರಾಗಿತ್ತು. ವೈಟ್ ಫೀಲ್ಡ್ ವಿಭಾಗದಲ್ಲಂತೂ ಕ್ಯಾಬ್ ಗಳ ಕೊರತೆ ಹೆಚ್ಚಾಗಿತ್ತು. ಈ ಹಿನ್ನಲೆಯಲ್ಲಿ ಗಸ್ತು ವಾಹನಗಳನ್ನು ಬಳಸಿಕೊಂಡು ಜನರನ್ನು ಅವರವರ ಮನೆಗಳಿಗೆ ಬಿಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.