ಪ್ರಸ್ತುತ ಸರ್ಕಾರಿ ಶಾಲೆಯ ಮಕ್ಕಳಿಗೆ ಅಕ್ಕಿ, ಗೋಧಿ, ಕಾಳುಗಳು ಹಾಗೂ ತರಕಾರಿಗಳಿಂದ ಮಾಡಿದ ಆಹಾರವನ್ನು ನೀಡಲಾಗುತ್ತಿದ್ದು, ಅಕ್ಕಿಯ ಬದಲಾಗಿ ಸಿರಿಧಾನ್ಯಗಳನ್ನು ಸೇರ್ಪಡೆಗೊಳಿಸಲಾಗುತ್ತದೆ. ಇದಲ್ಲದೆ ಬುಧವಾರದಂದು ಮಕ್ಕಳಿಗೆ ನೀಡಲಾಗುತ್ತಿರುವ ಸಿಹಿ ಪದಾರ್ಥವನ್ನೂ ಕೂಡ ಸಿರಿಧಾನ್ಯ ಬಳಸಿ ಮಾಡಿದ ಸಿಹಿಯನ್ನೇ ನೀಡಲು ಸರ್ಕಾರ ನಿರ್ಧರಿಸಿದೆ.