ಮೂಲಗಳ ಪ್ರಕಾರ ಇಂದು ಮುಂಜಾನೆ ಚಿತ್ರದುರ್ಗದ ಸಿಬಾರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ಸಂಭವಿಸಿದ್ದು, ಚಲಿಸುತ್ತಿದ್ದ ಲಾರಿಗೆ ಕ್ರೂಸರ್ ಗಾಡಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕ್ರೂಸರ್ ನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರೆಲ್ಲರೂ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಶಿವಲಿಂಗ, ಸಿದ್ದಾರ್ಥ್, ವಿನೋಧ, ಶಿವಲಿಂಗ ಕೊಕ್ಕನೂರು, ರಾಕೇಶ್ ಎಂದು ತಿಳಿದು ಬಂದಿದೆ.