ಕಲಬುರಗಿ: ಫ್ಲಾಟ್ ಫಾರಂ ಗೋಡೆಗೆ ಡಿಕ್ಕಿ ಹೊಡೆದ ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು!

ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು ಹಳಿ ತಪ್ಪಿ ನಿಲ್ದಾಣದ ಗೋಡೆಗೆ ಢಿಕ್ಕಿ ಹೊಡೆದಿರುವ ಘಟನೆ ಕಲಬುರಗಿಯ ವಾಡಿ ರೈಲು ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ.
ಫ್ಲಾಟ್ ಫಾರಂ ಗೋಡೆಗೆ ಡಿಕ್ಕಿ ಹೊಡೆದ ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು
ಫ್ಲಾಟ್ ಫಾರಂ ಗೋಡೆಗೆ ಡಿಕ್ಕಿ ಹೊಡೆದ ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು
Updated on: 
ಕಲಬುರಗಿ: ಸೋಲಾಪುರ-ರಾಯಚೂರು ಪ್ಯಾಸೆಂಜರ್ ರೈಲು ಹಳಿ ತಪ್ಪಿ ನಿಲ್ದಾಣದ ಗೋಡೆಗೆ ಢಿಕ್ಕಿ ಹೊಡೆದಿರುವ ಘಟನೆ ಕಲಬುರಗಿಯ ವಾಡಿ ರೈಲು ನಿಲ್ದಾಣದಲ್ಲಿ ಗುರುವಾರ ಸಂಭವಿಸಿದೆ.
ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ ಸೊಲಾಪುರದಿಂದ ರಾಯಚೂರಿಗೆ ತೆರಳುತ್ತಿದ್ದ ರೈಲು ವಾಡಿ ರೈಲು ನಿಲ್ದಾಣದ ಸಮೀಪ ಆಗಮಿಸುತ್ತಿದ್ದಂತೆಯೇ ಹಳಿ ತಪ್ಪಿದೆ. ಈ ವೇಳೆ ರೈಲಿನ ಎಂಜಿನ್ ಭಾಗ ನಿಲ್ದಾಣದ ಗೋಡೆ ಢಿಕ್ಕಿ  ಹೊಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಘಟನೆ ವೇಳೆ ನಿಲ್ದಾಣದ ಸಮೀಪ ಜನರಿದ್ದರಾದರೂ, ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಅಂತೆಯೇ ರೈಲಿನಲ್ಲಿದ್ದ  ಪ್ರಯಾಣಿಕರಿಗೂ ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿದುಬಂದಿದೆ.
ಪ್ರಸ್ತುತ ಘಟನಾ ಸ್ಥಳಕ್ಕೆ ರೈಲ್ವೇ ಸುರಕ್ಷತಾ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿದರು. ಅಂತೆಯೇ ಇತರೆ ಸಿಬ್ಬಂದಿಗಳೊಂದಿಗೆ ಹಳಿ ದುರಸ್ತಿ ಕಾರ್ಯ ಮಾಡುತ್ತಿದ್ದು, ಹಳಿ ತಪ್ಪಿದ್ದ ರೈಲು ಎಂಜಿನ್ ಭಾಗವನ್ನು ಹಳಿ ಮೇಲೆ  ಕೂರಿಸಿದ್ದಾರೆ. ಇನ್ನು ಘಟನೆಗೆ ದಶಕಗಳ ಹಿಂದಿನ ಗೋಡೆಯಾ ಕಾರಣ ಎಂದು ಹೇಳಲಾಗಿತ್ತು, ದಶಕಗಳ ಹಿಂದೆ ಹಳೆಯ ರೈಲುಗಳಿಗೆ ಹೊಂದಾಣಿಕೆಯಾಗುವಂತೆ ಗೋಡೆ ನಿರ್ಮಿಸಲಾಗಿತ್ತು. ಆದರೆ ಈಗಿನ ಹೊಸ ರೈಲು ಎಂಜಿನ್  ಗಳ ಗಾತ್ರ ಕೊಂಚ ದೊಡ್ಡದಾರಿರುವುದೇ ಘಟನೆದೆ ಕಾರಣ ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಪ್ರಸ್ತುತ ಗೊಡೆಯಲ್ಲಿನ ಕಲ್ಲುಗಳನ್ನು ತೆಗೆಯುವ ಮೂಲಕ ರೈಲು ಸಿಬ್ಬಂದಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com