ಬೆಳಗಾವಿ: ರಸ್ತೆ ಅಪಘಾತ, ಹಿರಿಯ ಪತ್ರಕರ್ತ ವೀರೇಶ ಹಿರೇಮಠ ಸಾವು

ಬೆಳಗಾವಿ ಬಳಿ ನಂದಗಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಮೃತಪಟ್ಟಿದ್ದಾರೆ.
ಡಾ. ವೀರೇಶ್ ಹಿರೇಮಠ್,
ಡಾ. ವೀರೇಶ್ ಹಿರೇಮಠ್,
Updated on: 
ಬೆಳಗಾವಿ: ಬೆಳಗಾವಿ ಬಳಿ ನಂದಗಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಮೃತಪಟ್ಟಿದ್ದಾರೆ.
ಕುಟುಂಬದೊಡನೆ ಗೋವಾ ಪ್ರವಾಸ ಮುಗಿಸಿ ಬಾಗಲಕೋಟೆಗೆ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಬವಿಸಿದೆ. ಹಿರೇಮಠ ಅವರಿದ್ದ ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತವಾಗಿದ್ದು ಘಟನೆ ವೇಳೆ ಕಾರಿನಲ್ಲಿದ್ದ ಕಾರಿನಲ್ಲಿದ್ದ ಪತ್ನಿ ಗೌರಿ  ಮತ್ತು ಕಾರು ಚಾಲಕ ಸುನೀಲ್  ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಧಾರವಾಡದ ಸಿವಿಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟೆಯ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೀರೇಶ ಹಿರೇಮಠ ಎಂ.ಎ(ಎಂಸಿ ಜೆ), ಪಿಜಿ ಡಿಪ್ಲೋಮಾ, ಪಿಎಚ್ ಡಿ ಪದವಿ ಪಡೆದಿದ್ದರು.
ಮೃತದ ಪಾರ್ಥಿವ ಶರೀರವನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com