ಮಹಾದಾಯಿ ವಿವಾದ: ಗೋವಾಗೂ ತಟ್ಟಿದ ಕರ್ನಾಟಕ ರಾಜ್ಯ ಬಂದ್ ಬಿಸಿ

ಮಹಾದಾಯಿ ವಿವಾದ ಕುರಿತಂತೆ ಗುರುವಾರ ರಾಜ್ಯದಲ್ಲಿ ಯಶಸ್ವಿಯಾಗಿ ಬಂದ್ ಆಚರಿಸಲಾಗಿದ್ದು, ರಾಜ್ಯದ ಬಂದ್ ಬಿಸಿ ಗೋವಾ ರಾಜ್ಯಕ್ಕೂ ತಟ್ಟಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಪಣಜಿ: ಮಹಾದಾಯಿ ವಿವಾದ ಕುರಿತಂತೆ ಗುರುವಾರ ರಾಜ್ಯದಲ್ಲಿ ಯಶಸ್ವಿಯಾಗಿ ಬಂದ್ ಆಚರಿಸಲಾಗಿದ್ದು, ರಾಜ್ಯದ ಬಂದ್ ಬಿಸಿ ಗೋವಾ ರಾಜ್ಯಕ್ಕೂ ತಟ್ಟಿದೆ. 
ರಾಜ್ಯದಲ್ಲಿ ಬಂದ್ ಆಚರಿಸಿದ ಪರಿಣಾಮ ಗೋವಾ ರಾಜ್ಯ ಸಾರಿಗೆ ಇಲಾಖೆಗೆ ರೂ.3 ಲಕ್ಷ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. 
ಮಹಾದಾಯಿ ವಿವಾದದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಆಗ್ರಹಿಸಿ ನಿನ್ನೆ ರಾಜ್ಯದಲ್ಲಿ ಬಂದ್ ಆಚರಿಸಲಾಗಿತ್ತು. ಬಂದ್ ಹಿನ್ನಲೆಯಲ್ಲಿ ಅಂತರ್ ರಾಜ್ಯ  ಬಸ್ ಗಳ ಸಂಚಾರ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಈ ಹಿನ್ನಲೆಯಲ್ಲಿ ಗೋವಾ ಸಾರಿಗೆ ಇಲಾಖೆಗೆ ರೂ.3 ಲಕ್ಷ ನಷ್ಟ ಉಂಟಾಗಿದೆ ಎಂದು ಉನ್ನತಾಧಿಕಾರಿಗಳು ಹೇಳಿದ್ದಾರೆ. 
ಕರ್ನಾಟಕ 40 ಬಸ್ ಗಳು ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಶುಕ್ರವಾರದಿಂದ ಸೇವೆಗಳು ಎಂದಿನಂತೆ ಆರಂಭಗೊಳ್ಳಲಿವೆ. ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಇಲಾಖೆಗೆ ರೂ.3 ಲಕ್ಷ ನಷ್ಟ ಉಂಟಾಗಿದೆ ಎಂದು ಗೋವಾದ ಕದಂಬ ಸಾರಿಗೆ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com