ಕರ್ನಾಟಕ: ವೇತನಕ್ಕಾಗಿ ಕಾಯುತ್ತಿದ್ದಾರೆ 45 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರು

ಹಲವು ವರ್ಷಗಳಿಂದಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕಸದ ಸಮಸ್ಯೆ ಕಾಡುತ್ತಿದೆ. ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕಸ ತೆಗೆದು ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಸೂಕ್ತ ಸಮಯಕ್ಕೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹಲವು ವರ್ಷಗಳಿಂದಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಕಸದ ಸಮಸ್ಯೆ ಕಾಡುತ್ತಿದೆ. ಕೋಟ್ಯಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ವೆಚ್ಚ ಮಾಡುತ್ತಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಕಸ ತೆಗೆದು ನಗರ ಸ್ವಚ್ಛಗೊಳಿಸುವ ಪೌರ ಕಾರ್ಮಿಕರಿಗೆ ಸೂಕ್ತ ಸಮಯಕ್ಕೆ ಸರಿಯಾಗಿ ವೇತನಗಳು ಸಿಗುತ್ತಿಲ್ಲ. ವೇತನ ನೀಡುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದರಿಂದ 45 ಸಾವಿರಕ್ಕೂ ಅಧಿಕ ಪೌರ ಕಾರ್ಮಿಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. 
6 ತಿಂಗಳಿನಿಂದ ವೇತನ ಸಿಗದ ಕಾರಣ ಮನನೊಂದ ಪೌರ ಕಾರ್ಮಿಕನೊಬ್ಬ ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ. ಪೌರ ಕಾರ್ಮಿಕ ಸುಬ್ರಮಣಿ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದರು. 
ವೇತನ ಸರಿಯಾಗಿ ಸಿಗದೆ ಇದೇ ರೀತಿ ಸಾವಿರಾರು ಪೌರ ಕಾರ್ಮಿಕರು ಇಂದು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ರಾಜ್ಯದಲ್ಲಿರುವ 45,000 ಪೌರ ಕಾರ್ಮಿಕರು ವೇತನ ಯಾವಾಗ ಬರುತ್ತದೆ ಎಂದು ಬಕಪಕ್ಷಿಗಳಂತೆ ಕಾದು ಕುಳಿತಿದ್ದಾರೆ. 
ಸುರಕ್ಷಾ ಕವಚಗಳಿಲ್ಲದೆಯೇ ಪೌರ ಕಾರ್ಮಿಕರು ನಗರ ಹಾಗೂ ರಾಜ್ಯದ ರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಮಾಡುತ್ತಿದ್ದು, ಬೆಲೆ ಕಟ್ಟಲಾಗದ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಪೌರ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. 
ಮಹಿಳಾ ಪೌರ ಕಾರ್ಮಿಕರ ಪರಿಸ್ಥಿತಿಗಳಂತೂ ಹೇಳತೀರದಾಗಿದೆ. ವೇತವನ್ನೇ ಸರಿಯಾಗಿ ನೀಡದ ರಾಜ್ಯ ಸರ್ಕಾರ ಕಸವನ್ನು ಹೇಗೆ ನಿರ್ವಹಿಸಬೇಕೆಂಬುದರ ಅರಿವು ಮೂಡಿಸಲು ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಗಳಿಗೆ ಕಳುಹಿಸಲು ನಿರ್ಧರಿಸಿದೆ. ಬ್ಯಾಚ್ ಗಳಂತೆ ಪೌರ ಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸಲು ಸರ್ಕಾರ ನಿರ್ಧರಿಸಿದೆ. 
 ನಗರ, ರಾಜ್ಯದ ಹಲವು ಸ್ಥಳೀಯರನ್ನು ಸೇರಿದಂತೆ ಕಳೆದ 8 ತಿಂಗಳುಗಳಿಂದಲೂ ಒಟ್ಟು 502 ಪೌರ ಕಾರ್ಮಿಕರನ್ನು ಸಿಂಗಾಪುರಕ್ಕೆ ಕಳುಹಿಸಲಾಗಿದೆ. ಇದೊಂದು ನಾಲ್ಕು ದಿನಗಳ ಪ್ರವಾಸವಾಗಿದ್ದು, ಪ್ರತೀಯೊಬ್ಬರಿಗೂ ರೂ.80,000 ಖರ್ಚು ಮಾಡಲಾಗುತ್ತಿದೆ. ಮುಂದಿನ 1 ವರ್ಷಗಳಲ್ಲಿ ಇನ್ನೂ 1,800 ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಕಳುಹಿಸುವ ಉದ್ದೇಶವನ್ನು ಹೊಂದರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ವಿದೇಶ ಪ್ರವಾಸಕ್ಕೆ ಸರ್ಕಾರ ರೂ.14.40 ಕೋಟಿ ಹಣವನ್ನು ಖರ್ಚು ಮಾಡುತ್ತಿದ್ದು, ಇದೇ ಹಣವನ್ನು ಪೌರ ಕಾರ್ಮಿಕರ ವೇತನವಾಗಿ ನೀಡಿದ್ದರೆ, ಇಂತಹ ಪರಿಸ್ಥಿತಿಗಳು ಎದುರಾಗುತ್ತಿರಲಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com