ಸಾಕಪ್ಪಾ ಸಾಕು ಮೆಟ್ರೋ ಸಿಟಿ ಸಹವಾಸ: ಹುಬ್ಬಳ್ಳಿಯತ್ತ ಸ್ಟಾರ್ಟ್ ಅಪ್ ಕಂಪೆನಿಗಳ ವಲಸೆ

ಗ್ರಾಮೀಣ ಮತ್ತು ದ್ವಿತೀಯ ದರ್ಜೆ ನಗರ ನಿವಾಸಿಗಳಿಗೆ ಸಹಾಯವಾಗುವ ಕೈಗೆಟಕುವ ದರದ ಶ್ರವಣ ...
ಹುಬ್ಬಳ್ಳಿಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸ್ಯಾಂಡ್ ಬಾಕ್ಸ್ ಸ್ಟಾರ್ಟ್ ಅಪ್ ನಲ್ಲಿ ಯುವ ಉದ್ಯಮಿಗಳು
ಹುಬ್ಬಳ್ಳಿಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸ್ಯಾಂಡ್ ಬಾಕ್ಸ್ ಸ್ಟಾರ್ಟ್ ಅಪ್ ನಲ್ಲಿ ಯುವ ಉದ್ಯಮಿಗಳು
Updated on: 

ಹುಬ್ಬಳ್ಳಿ: ಗ್ರಾಮೀಣ ಮತ್ತು ದ್ವಿತೀಯ ದರ್ಜೆ ನಗರ ನಿವಾಸಿಗಳಿಗೆ ಸಹಾಯವಾಗುವ ಕೈಗೆಟಕುವ ದರದ ಶ್ರವಣ ಪ್ರಯೋಗಾಲಯವನ್ನು ಸ್ಟಾರ್ಟ್ ಅಪ್ ಮೂಲಕ ನಗರ ಮೂಲದ ವೈದ್ಯರು ಸೃಷ್ಟಿಸಿದ್ದಾರೆ. ಅಲ್ಲದೆ ರೋಗಿಗಳ ಮನೆಬಾಗಿಲಿಗೆ ಈ ವ್ಯವಸ್ಥೆಯನ್ನು ಕೊಂಡೊಯ್ಯಲಾಗುತ್ತದೆ.

ಬೆಂಗಳೂರು ಮೂಲದ ವೈದ್ಯರು ಈ ಸ್ಟಾರ್ಟ್ ಅಪ್ ನ್ನು ಸ್ಥಾಪಿಸಿದ್ದು ಹಳದೆ ಕಾಯಿಲೆಯಿಂದ ಜನಿಸುವ ಮಕ್ಕಳಿಗೆ ಕಡಿಮೆ ವೆಚ್ಚದ ಇನ್ಕ್ಯುಬೇಟರ್ ನ್ನು ರಚಿಸಿದ್ದಾರೆ. ಪ್ರಸ್ತುತ ಆಸ್ಪತ್ರೆ ವಿದೇಶಿ ಕಂಪೆನಿಗಳ ಉಪಕರಣಗಳಿಗಾಗಿ ಅವಲಂಬಿತವಾಗಿದೆ. ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಉತ್ಪನ್ನ ಮಾರುಕಟ್ಟೆಗೆ ಬರುವ ಮೊದಲೇ 350 ಇನ್ಕ್ಯುಬೇಟರ್ ಗಳಿಗೆ ಆರ್ಡರ್ ನೀಡಿದೆ.

ಸ್ಟಾರ್ಟ್ ಅಪ್ ಕೇವಲ ಮೆಟ್ರೊ ಸಿಟಿಗಳಿಗೆ ಮಾತ್ರ ಸೀಮಿತ ಎಂಬ ಭಾವನೆಯನ್ನು ಸುಳ್ಳು ಮಾಡಿ ಹುಬ್ಬಳ್ಳಿಯಲ್ಲಿ ಉದ್ಯಮವನ್ನು ಆರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವಾರು ಕೋಟಿ ರೂಪಾಯಿ ಉದ್ಯಮ ಮಾಡುವುದರೊಂದಿಗೆ ಸುಮಾರು 80 ಮಂದಿ ಇಲ್ಲಿ ನೆಲೆಸಲು ಆರಂಭಿಸಿದ್ದಾರೆ. ಕರ್ನಾಟಕದ ಎರಡನೇ ಅತಿ ದೊಡ್ಡ ನಗರವೆನಿಸಿಕೊಂಡಿರುವ ಹುಬ್ಬಳ್ಳಿಯಲ್ಲಿ ದೇಶದ ಅತಿದೊಡ್ಡ ಇನ್ಕ್ಯುಬೇಟರ್ ಕೇಂದ್ರಗಳಿವೆ.

ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡಿರುವ ಸ್ಯಾಂಡ್ ಬಾಕ್ಸ್ ಸ್ಟಾರ್ಟ್ ಅಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ ಎಂ ಪಾಟೀಲ್, ಇದು ದೇಶದಲ್ಲಿ ಅತಿದೊಡ್ಡ ವ್ಯವಸ್ಥೆಯಾಗಿದ್ದು ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಅಂಡ್ ಮ್ಯಾನುಫಾಕ್ಚರಿಂಗ್-ಇಎಸ್ ಡಿಎಂಗೆ ಲಭ್ಯವಾಗುವಂತೆ ಮಾಡುತ್ತದೆ. ಇದು ಬೆಂಗಳೂರು, ಹೈದರಾಬಾದ್ ಮತ್ತು ಇತರ ಮೆಟ್ರೊ ನಗರಗಳಲ್ಲಿನ ಸ್ಟಾರ್ಟ್ ಅಪ್ ಗಳನ್ನು ಆಕರ್ಷಿಸುತ್ತದೆ. ಬೆಂಗಳೂರಿನ ಮೂವರು ಸದಸ್ಯರ ತಂಡದಲ್ಲಿ 30 ಮಂದಿ ನೌಕರರಿದ್ದಾರೆ ಎಂದರು.

ಮೆಟ್ರೊಪಾಲಿಟನ್ ನಗರ ಹೊರತುಪಡಿಸಿ ಸ್ಯಾಂಡ್ ಬಾಕ್ಸ್ ಸ್ಟಾರ್ಟ್ ಅಪ್ ಇನ್ಕ್ಯುಬೇಷನ್ ಕೇಂದ್ರ ಬೇರೆ ನಗರಗಳಲ್ಲಿ ಇದೇ ಮೊದಲು ಎಂದು ದೇಶಪಾಂಡೆ ಫೌಂಡೇಶನ್ ನ ಗುರುರಾಜ್ ದೇಶಪಾಂಡೆ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com