ಬೆಂಗಳೂರು: ಸ್ಕೂಟರ್ ಓಡಿಸುವಾಗ ಸೆಲ್ಫೀ ಕ್ಲಿಕ್: ಕೆಳಗೆ ಬಿದ್ದು ಯುವಕ ಸಾವು

ಸ್ಕೂಟರ್ ನಲ್ಲಿ ಓಡಿಸುವಾಗ ಸೆಲ್ಫೀ ತೆಗೆದುಕೊಂಡ ಕಾಲ್ ಸೆಂಟರ್ ಉದ್ಯೋಗಿಯೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸ್ಕೂಟರ್ ನಲ್ಲಿ ಓಡಿಸುವಾಗ ಸೆಲ್ಫೀ ತೆಗೆದುಕೊಂಡ ಕಾಲ್ ಸೆಂಟರ್ ಉದ್ಯೋಗಿಯೊಬ್ಬ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಳ್ಳಾರಿಯ ರಸ್ತೆಯ ದೇವನಹಳ್ಳಿ ಸಮೀಪ ಸಂಭವಿಸಿದೆ.
ಗೇರ್ ಲೆಸ್ ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮೂವರು ಸೆಲ್ಫೀ ತೆಗದುಕೊಳ್ಳಲು ಯತ್ನಿಸಿದ್ದಾರೆ, ಈ ವೇಳೆ ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ,  ವೈಟ್ ಫೀಲ್ಡ್ ನಿವಾಸಿ ಸುಹಾನೋ ಮಹಾಂತೋ ಮೃತ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದಾನೆ, ಈತನ ಮತ್ತಿಬ್ಬರು ಸಹೋದ್ಯೋಗಿಗಳಾದ ಪಂಕಜ್ ಕುಮಾರ್ ಮತ್ತು ಸೌರವ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,
ರಾಜಸ್ತಾನ ಮೂಲದ ಮೂವರು ಪಿಜಿ ಹಾಸ್ಟೆಲ್ ನಲ್ಲಿದ್ದು ಮಹದೇವಪುರದ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ವಾರದ ರಜೆ ಇದ್ದ ಕಾರಣ ಮೂವರು ಸ್ಕೂಟರ್ ನಲ್ಲಿ ನಂದಿ ಬೆಟ್ಟಕ್ಕೆ ತೆರಳಿದ್ದರು,. ಸುಹಾನೋ ಹೊಂಡಾ ಆ್ಯಕ್ಟೀವಾ ಓಡಿಸುತ್ತಿದ್ದ , ಆತನ ಸಹೋದ್ಯೋಗಿಗಳು ಸೆಲ್ಫೀ ತೆಗೆಯುತ್ತಿದ್ದರು. ಈ ವೇಳೆ ತಾನು ಕೂಡ ಸೆಲ್ಫೀ ತೆಗೆಯುವುದಾಗಿ ಮೊಬೈಲ್  ಕೇಳಿದ್ದಾನೆ, ತನ್ನ ಎಡಗೈಯಲ್ಲಿ ಮೊಬೈಲ್ ಹಿಡಿದು ಸೆಲ್ಫೀ ತೆಗೆಯಲು ಪ್ರಯತ್ನಿಸುವಾಗ ಸುಹಾನೋ ಮುಂದೆ ಹೋಗುತ್ತಿದ್ದ ಕ್ಯಾಬ್ ಗೆ ಡಿಕ್ಕಿ ಹೊಡೆದಿದ್ದಾನೆ. ಕೆಳಗೆ ಬಿದ್ದ ಕೂಡಲೇ ಆತ ಧರಿಸಿದ್ದ ಹೆಲ್ಮೆಟ್ ಹೊರ ಬಂದಿದೆ, ತಲೆಗೆ ಗಾಯಗಳಾದ ಪರಿಣಾಮ ಆತ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com