ಬೆಂಗಳೂರು: ಪತ್ನಿಯ ಅಶ್ಲೀಲ ಫೋಟೋ, ಮೊಬೈಲ್ ನಂಬರ್ ಡೇಟಿಂಗ್ ವೆಬ್'ಸೈಟ್ ಗೆ ಹಾಕಿದ್ದ ಪತಿ ಬಂಧನ

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿಯೊಬ್ಬ ಪತ್ನಿಯ ಮೇಲಿನ ದ್ವೇ,ಕ್ಕೆ ಪತ್ನಿಯ ಅಶ್ಲೀಲ ಫೋಟೋ ಹಾಗೂ ಮೊಬೈಲ್ ಸಂಖ್ಯೆಯನ್ನು ಡೇಟಿಂಗ್ ವೆಬ್'ಸೈಟ್'ನಲ್ಲಿ ಹಾಕಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತಿಯೊಬ್ಬ ಪತ್ನಿಯ ಮೇಲಿನ ದ್ವೇ,ಕ್ಕೆ ಪತ್ನಿಯ ಅಶ್ಲೀಲ ಫೋಟೋ ಹಾಗೂ ಮೊಬೈಲ್ ಸಂಖ್ಯೆಯನ್ನು ಡೇಟಿಂಗ್ ವೆಬ್'ಸೈಟ್'ನಲ್ಲಿ ಹಾಕಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿ.ಎಂ ವಿನಯ್ (30) ಬಂಧಿತ ಆರೋಪಿಯಾಗಿದ್ದಾನೆ. ನಗರದಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಮನಸ್ತಾಪ ಎದುರಾಗಿತ್ತು. 
ವಿನಯ್ ಕಿರುಕುಳದಿಂದ ಬೇಸತ್ತಿದ್ದ ಪತ್ನಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಮಹಿಳಾ ವನಿತಾ ಸಹಾಯವಾಣಿಗೆ ದೂರು ನೀಡಿದ್ದರು. 
ಬಳಿಕ ವನಿತಾ ಸಹಾಯವಾಣಿ ಸಿಬ್ಬಂದಿ ಇಬ್ಬರಿಗೂ ಕೌನ್ಸಿಲಿಂಗ್ ನಡೆಸಿದ್ದರು. ಇಷ್ಟಾದರೂ ಆತ ವರ್ತನೆ ಬದಲಾಯಿಸಿಕೊಂಡಿರಲಿಲ್ಲ. ವಿನಯ್ ಇತ್ತೀಚೆಗೆ ಕೆಲಸ ಬಿಟ್ಟು ಊರಿಗೆ ಹೋಗಿ ನೆಲೆಸಿದ್ದ. ಬಳಿಕ ಇಬ್ಬರು ಪರಸ್ಪರ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದರು. ಅದರಂತೆ ಆರೋಪಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ.
ಪತ್ನಿ ಮೇಲಿನ ದ್ವೇಷದಿಂದ ಆರೋಪಿ ಆಕೆಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ್ದ. ಇದರಂತೆ ಪತ್ನಿಯ ಮೊಬೈಲ್ ಸಂಖ್ಯೆ ಮತ್ತು ಫೋಟೋವನ್ನು ಬೇರೊಂದು ದೇಹಕ್ಕೆ ಸೇರಿಸಿ ಡೇಟಿಂಗ್ ವೆಬ್'ಸೈಟ್ ನಲ್ಲಿ ಹಾಕಿದ್ದ. ಫೋಟೋ ಮತ್ತು ಮೊಬೈಲ್ ನೋಡಿದ ಕೆಲ ಯುವಕರು ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ. ಇದರಿಂತ ಬೇಸತ್ತ ಮಹಿಳೆ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. 
ದೂರಿನ ಅನ್ವಯ ಇದೀಗ ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com