ಹೊನ್ನಾವರ: ಎರಡು ಲಾರಿಗಳ ಮುಖಾಮುಖಿ ಡಿಕ್ಕಿ, ಚಾಲಕ ಸಾವು

ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಚಾಲಕ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮಂಕಿ ಸಮೀಪ ನಡೆದಿದೆ.
ಹೊನ್ನಾವರ: ಎರಡು ಲಾರಿಗಳ ಮುಖಾಮುಖಿ ಡಿಕ್ಕಿ, ಚಾಲಕ ಸಾವು
ಹೊನ್ನಾವರ: ಎರಡು ಲಾರಿಗಳ ಮುಖಾಮುಖಿ ಡಿಕ್ಕಿ, ಚಾಲಕ ಸಾವು
ಹೊನ್ನಾವರ: ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಚಾಲಕ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಮಂಕಿ ಸಮೀಪ ನಡೆದಿದೆ.
ಫ್ಲೈವುಡ್​ ತುಂಬಿಕೊಂಡು ಕೇರಳದಿಂದ ಬರುತ್ತಿದ್ದ ಲಾರಿ ಚಾಲಕ  ರಾಜೇಂದ್ರ ಬಾಪು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಕ್ಲೀನರ್ ನಿತೀನ್‍ ಗಂಭೀರವಾಗಿ ಗಾಯಗೊಂಡಿದ್ದಾನೆ.
ಮತ್ತೊಂದು ಲಾರಿ ಮುಂಬೈನಿಂದ ಮಂಗಳೂರು ಕಡೆಗೆ ತೆರಳುತ್ತಿತ್ತು ಎನ್ನಲಾಗಿದ್ದು ಮಂಕಿ ಗ್ರಾಮದ ಸಮೀಪ ಬಂದಾಗ  ಫ್ಲೈವುಡ್ ಇದ್ದ ಲಾರಿ ಡಿಕ್ಕಿಯಾಗಿ ಲಾರಿ ಪಲ್ಟಿಯಾಗಿದೆ. ಈ ಅಪಘಾತದಿಂಡ ಚಾಲಕ ಸಾವನ್ನಪ್ಪಿದ್ದಾನೆ.
ಇನ್ನೊಂದು ಲಾರಿಯಲ್ಲಿದ್ದ ಚಾಲಕನ ಸ್ಥಿತಿ ಬಗೆಗೆ ಮಾಹಿತಿ ಲಭ್ಯವಾಗಿಲ್ಲ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com