ಎಸ್ಸಿ-ಎಸ್ಟಿ ಸಮುದಾಯಗಳ ನೌಕರರ ಬಡ್ತಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ರಾಜ್ಯದ ಆಡಳಿತದಲ್ಲಿ ಮತ್ತೆ ಪುನರ್ರಚನೆಗೆ ದಾರಿ ಮಾಡಿಕೊಡುವ ವಿದ್ಯಾಮಾನದಲ್ಲಿ ರಾಷ್ಟ್ರಪತಿ ...
ರಾಷ್ಟ್ರಪತಿ ರಾಮನಾಥ್ ಕೋವಿಂದ್
ರಾಷ್ಟ್ರಪತಿ ರಾಮನಾಥ್ ಕೋವಿಂದ್
Updated on: 

ಬೆಂಗಳೂರು: ರಾಜ್ಯದ ಆಡಳಿತದಲ್ಲಿ ಮತ್ತೆ ಪುನರ್ರಚನೆಗೆ ದಾರಿ ಮಾಡಿಕೊಡುವ ವಿದ್ಯಾಮಾನವೊಂದರಲ್ಲಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಬಡ್ತಿ ಮಸೂದೆಗೆ ಸಹಿ ಹಾಕಿದ್ದಾರೆ.

ಇದನ್ನು ಕರ್ನಾಟಕ ಸರ್ಕಾರಿ ಸೇವಕರಿಗೆ ಪರಿಣಾಮಕಾರಿ ಹಿರಿಯತನ ವಿಸ್ತರಣೆ, ಮೀಸಲಾತಿ ಆಧಾರದ ಮೇಲಿನ ರಾಜ್ಯದ ನಾಗರಿಕ ಸೇವೆಗಳ ಹುದ್ದೆಗೆ) ಮಸೂದೆ, 2017 ಎಂದು ಕರೆಯಲಾಗುತ್ತದೆ.

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಸಾವಿರಾರು ಎಸ್ಸಿ/ಎಸ್ಟಿ ವರ್ಗಗಳ ಅಧಿಕಾರಿಗಳಿಗೆ ಹಿಂಬಡ್ತಿ ನೀಡಿ, ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ನೌಕರರು ಮತ್ತು ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ನೀಡಿದ ಕೆಲವೇ ವಾರಗಳಲ್ಲಿ ರಾಷ್ಟ್ರಪತಿಗಳು ಈ ಮಸೂದೆಗೆ ಅಂಕಿತ ಹಾಕಿದ್ದಾರೆ. ಸುಪ್ರೀಂ ಕೋರ್ಟ್ ಬಡ್ತಿ ಅಥವಾ ಪದೋನ್ನತಿಯಲ್ಲಿ ಮೀಸಲಾತಿಯನ್ನು ತೆಗೆದುಹಾಕಿತ್ತು.

ಈ ಬೆಳವಣಿಗೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮತ್ತು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಸ್ವಾಗತಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಬದ್ಧತೆ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ತೋರಿಸಿದ ಕಾಳಜಿಗೆ ಸಿಕ್ಕಿರುವ ಗೆಲುವು ಎಂದು ಪರಮೇಶ್ವರ್ ಬಣ್ಣಿಸಿದ್ದಾರೆ.

ಈ ಮಸೂದೆ 1978ರ ನಂತರ ರಾಜ್ಯದಲ್ಲಿ ಮೀಸಲು ನೀತಿಯಡಿ ಪರಿಣಾಮಕಾರಿ ಹಿರಿತನದ ಆಧಾರದ ಮೇಲೆ ಬಡ್ತಿ ಹೊಂದಿದ ವ್ಯಕ್ತಿಗಳನ್ನು ಎಲ್ಲಾ ಇಲಾಖೆಗಳಲ್ಲಿ ಎಸ್ಸಿ ಮತ್ತು ಎಸ್ಟಿ ಸರಿಯಾದ ಪ್ರಾಕಿನಿಧಿತ್ವ ಕಲ್ಪಿಸುತ್ತದೆ. ಎಸ್ ಸಿ ಸಮುದಾಯದವರಿಗೆ ಬಡ್ತಿಯಲ್ಲಿ ಶೇಕಡಾ 15ರಷ್ಟು ಮೀಸಲಾತಿ ಮತ್ತು ಎಸ್ ಟಿ ಸಮುದಾಯದವರಿಗೆ ಶೇಕಡಾ 3ರಷ್ಟು ಮೀಸಲಾತಿ ಕಲ್ಪಿಸಲಿದೆ.

ಈ ಮಸೂದೆಯನ್ನು ಆದಷ್ಟು ಶೀಘ್ರ ಜಾರಿಗೆ ತರುವಂತೆ ಸಿಬ್ಬಂದಿ ಮತ್ತು ಆಡಳಿತಾತ್ಮಕ ಸುಧಾರಣೆ ಇಲಾಖೆಯನ್ನು ಕೇಳುತ್ತೇವೆ. ಎಸ್ ಸಿ/ಎಸ್ ಟಿ ನೌಕರರ ಮತ್ತು ಅಧಿಕಾರಿಗಳ ಬಡ್ತಿಗೆ ಸುತ್ತೋಲೆ ಹೊರಡಿಸಬಹುದು ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com