ಮುಂಗಾರು ವಿಳಂಬ: ಬಿತ್ತನೆ ಚಟುವಟಿಕೆ ಆರಂಭಿಸಿದ ಕಲಬುರಗಿ ರೈತರಲ್ಲಿ ಆತಂಕ

ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿ ಕೆಲವು ಜಲಾಶಯಗಳು ತುಂಬಿ ಹರಿಯುತ್ತಿವೆ, ಆದರೆ ಹೈದರಾಬಾದ್ ಕರ್ನಾಟಕದ ಕೆಲ ಭಾಗಗಳಲ್ಲಿ, ಮಳೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಕಲಬುರಗಿ: ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿ ಕೆಲವು ಜಲಾಶಯಗಳು ತುಂಬಿ ಹರಿಯುತ್ತಿವೆ, ಆದರೆ ಹೈದರಾಬಾದ್ ಕರ್ನಾಟಕದ ಕೆಲ ಭಾಗಗಳಲ್ಲಿ, ಮಳೆ ಕೊರೆತೆಯಿಂದಾಗಿ ನೀರಿನ ಸಮಸ್ಯೆ ಎದುರಾಗಿದೆ.
ಈ ವರ್ಷ ಉತ್ತಮ ಮಳೆಯಾಗುತ್ತದೆಂದು ಭಾವಿಸಿದ ಜಿಲ್ಲೆಯ ಜನ, ಜೂನ್ ತಿಂಗಳಿಂದ ಬಿತ್ತನೆ ಚಟುವಟಿಕೆ ಆರಂಭಿಸಿದ್ದರು. ಆರಂಭದ ಕೆಲ ದಿನಗಳಲ್ಲಿ ಉತ್ತಮ ಮಳೆಯಾಯಿತಾದರೂ ಅನಂತರ ಮಳೆ ನಾಪತ್ತೆಯಾಗಿದೆ. ಕಳೆದ 10 ದಿನಗಳಿಂದ ಒಂದು ಹನಿಯೂ ಮಳೆಯಾಗಿಲ್ಲ.
ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ರೈತರು 1,55.082 ಹೆಕ್ಟೇರ್ ಜಮೀನಿನಲ್ಲಿ ಬಿತ್ತೆನ ಕಾರ್ಯ ಮಾಡಿದ್ದಾರೆ, ಆದರೆ ಮಳೆಯಿಲ್ಲದ ಕಾರಣ ಉಳಿದ ಜಮೀನಲ್ಲಿ ಬಿತ್ತನೆ ಕಾರ್ಯ ಮಾಡಿಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಭೀಮಾ ಜಲಾಶಯ 3.16 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ,  ಆದರೆ ಸದ್ಯ ಅದರಲ್ಲಿ 0.699 ಟಿಎಂಸಿ ನೀರು ಮಾತ್ರ ಇದೆ, ಕಳೆದ ವರ್ಷ ಜೂನ್ 20ರ ವೇಳೆಗೆ 1.042 ಟಿಎಂಸಿ ನೀರು ಸಂಗ್ರಹವಾಗಿತ್ತು.
ಬೆಣ್ಣೆತೊರಾ ಜಲಾಶಯ 5.29 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯವಿದ್ದು, ಈಗ 3.22 ಟಿಎಂಸಿ ನೀರು ಇದೆ. ಕಳೆದ ವರ್ಷ ಇದೇ ಸಮಯಕ್ಕೆ 4.20 ಟಿಎಂಸಿ ಅಡಿ ನೀರಿತ್ತು.ಇನ್ನೂ ಬೀದರ್ ಜಿಲ್ಲೆಯ ಕಾರಂಜಾ ಜಲಾಶಯ ಹಾಗೂ ಹಟ್ಟಿಕುನಿ ಮತ್ತು ಸೌದಾಗರ್ ಜಲಾಶಯಗಳಲ್ಲಿ ನೀರಿನ ಮಟ್ಟ ತೀರ ಕಡಿಮೆಯಾಗಿದೆ. 
ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ,ಕಲಬುರಗಿ ನಗರ ಸೇರಿದಂತೆ ಹಲವು ಪ್ರದಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಸಾರದಾಗಿ ಬ್ಯಾರೇಜ್ ನಿಂದ ಭೀಮಾ ನದಿಗೆ ಕುಡಿಯುವ ನೀರಿನ ಉದ್ದೇಶಕ್ಕಾ ಬಿಡಲಾಗಿದೆ,
ಪ್ರಮುಖ ಜಲಾಶಯಗಳಲ್ಲಿ ನೀರಿನ ಕೊರತೆ ಎದುರಾಗಿದೆ,  ಇದಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ನೀರಿನ ಕೊರತೆ ಆರಂಭವಾಗಿದೆ ಎಂದು ರೈತರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com