ವಿಕ್ರಮ್ ಇನ್‌ವೆಸ್ಟ್‌ಮೆಂಟ್ ನಿಂದ 4 ಕೋಟಿ ವಂಚನೆ, ಕ್ರಿಕೆಟಿಗ ರಾಹುಲ್ ದ್ರಾವಿಡ್ ದೂರು ದಾಖಲು

ಹೂಡಿಕೆ ವಿಚಾರದಲ್ಲಿ ಹಲವಾರು ಜನರಿಗೆ ಕೋಟ್ಯಾಂತರ ರೂ. ವಂಚನೆ ಮಾಡಿದ್ದ ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್’’ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ .............
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
Updated on: 
ಬೆಂಗಳೂರು: ಹೂಡಿಕೆ ವಿಚಾರದಲ್ಲಿ ಹಲವಾರು ಜನರಿಗೆ ಕೋಟ್ಯಾಂತರ ರೂ. ವಂಚನೆ ಮಾಡಿದ್ದ  ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್’’ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೂ ಭಾರಿ ಪ್ರಮಾಣದ ಮೋಸ ಮಾಡಿದೆ. ‘ವಿಕ್ರಮ್ ಇನ್‌ವೆಸ್ಟ್‌ಮೆಂಟ್ ಸಂಥೆಯು ತಮಗೆ 4 ಕೋಟಿ ರೂ. ವಂಚನೆ ಮಾಡಿದೆ ಎಂದು ಆರೋಪಿಸಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬೆಂಗಳೂರಿನ ಸದಾಶಿವನಗರ ಪೋಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
"ತಮ್ಮಲ್ಲಿ ಹೂಡಿಕೆ ಮಾಡಿದವರಿಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಸಂಸ್ಥೆಯ ಆಡಳಿತ ಮಂಡಳಿ ಹೇಳಿದ ಕಾರಣ ನಾನು 2014ರಿಂದ 2018ರ ಫೆಬ್ರುವರಿವರೆಗೆ 20 ಕೋಟಿ ರೂ ಹೂಡಿಕೆ ಮಾಡಿದ್ದೆನು. ಇದೀಗ ಲಾಭಾಂಶವೂ ಇಲ್ಲ, ನಾನು ಹೂಡಿಕೆ ಮಾಡಿದ್ದ ಹಣವನ್ನು ಸಹ ಪೂರ್ಣವಾಗಿ ಹಿಂತಿರುಗಿಸಲಿಲ್ಲ. ಇದುವರೆವಿಗೆ ಸಂಸ್ಥೆಯು ನನಗೆ 16 ಕೋಟಿ ರೂ, ಗಳನ್ನು ಮಾತ್ರವೇ ನೀಡಿದ್ದು ಇನ್ನೂ 4 ಕೋಟಿ ರೂ. ವಂಚನೆ ಮಾಡಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಿ" ದ್ರಾವಿಡ್ ದೂರಿನಲ್ಲಿ ಹೇಳಿದ್ದಾರೆ.
ಹಣ ದುರ್ಬಳಕೆ (ಐಪಿಸಿ 403), ನಂಬಿಕೆ ದ್ರೋಹ (406) ಹಾಗೂ ವಂಚನೆ (420) ಆರೋಪಗಳಡಿ ಸದಾಶಿವನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆಗಾಗಿ ಬನಶಂಕರಿ ಠಾಣೆಗೆ ವರ್ಗಾಯಿಸಿದ್ದಾರೆ
ವಿಕ್ರಂ ಇನ್ವೆಸ್ಟ್‌ಮೆಂಟ್‌ ವಂಚನೆ ಸಂಬಂಧ ಬನಶಂಕರಿ, ವಿಜಯ ನಗರ, ಜಯನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸಂಥೆಯ ಮಾಲೀಕರಾದ ರಾಘವೇಂದ್ರ ಶ್ರೀನಾಥ್‌ ಇದಾಗಲೇ ಪೋಲೀಸರ ವಶದಲ್ಲಿದ್ದು ಎಸಿಎಂಎಂ ನ್ಯಾಯಾಲಯ ಅವರನ್ನು ಮಾರ್ಚ್ 28ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ವಿಕ್ರಮ್ ಗ್ಲೋಬಲ್ ಇನ್‌ವೆಸ್ಟ್‌ಮೆಂಟ್, ವಿಕ್ರಮ್ ಗ್ಲೋಬಲ್ ಸೊಲ್ಯುಷನ್ ಎಂಬ ಹೆಸರುಗಳಲ್ಲಿ ಬೆಂಗಳೂರು ಹಾಗೂ ಚೆನ್ನೈನಲ್ಲಿ ಸಂಸ್ಥೆಯು ಶಾಖೆಗಳನ್ನು ತೆರೆದು  1,800 ಜನರಿಗೆ ಸುಮಾರು 350-400 ಕೋಟಿ ವಂಚನೆ ಮಾಡಲಾಗಿದೆ. ಈ ಸಂಬಂಧ ದೂರುಗಳನ್ನು ಸ್ವೀಕರಿಸುತ್ತಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಪೋಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com