ರಾಜರಾಜೇಶ್ವರಿ ನಗರ: ಸರಗಳ್ಳರ ಜೊತೆ ಮಹಿಳೆ ಕಾದಾಟ, ದುಷ್ಕರ್ಮಿಗಳಿಂದ ಸರಕ್ಕಾಗಿ ಕಿರುಕುಳ

ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಮಹಿಳೆಯ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ, ಮಹಿಳೆ ಅದಕ್ಕೆ ವಿರೋಧಿಸಿ ಹಿನ್ನೆಲೆಯಲ್ಲಿ ಆಕೆಗೆ ಸರಗಳ್ಳರು ...
ರಾಜರಾಜೇಶ್ವರಿ ನಗರದಲ್ಲಿ ಸರಗಳ್ಳರ ಹಾವಳಿ
ರಾಜರಾಜೇಶ್ವರಿ ನಗರದಲ್ಲಿ ಸರಗಳ್ಳರ ಹಾವಳಿ
Updated on
ಬೆಂಗಳೂರು: ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು  ಹಾಡಹಗಲೇ ಮಹಿಳೆಯ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ, ಮಹಿಳೆ ಅದಕ್ಕೆ ವಿರೋಧಿಸಿದ ಹಿನ್ನೆಲೆಯಲ್ಲಿ ಆಕೆಗೆ ಸರಗಳ್ಳರು ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. 
32 ವರ್ಷದ ಗೃಹಿಣಿ ಸುಮಾರು 3.30 ರ ಹೊತ್ತಿಗೆ ತಮ್ಮ ಮನೆ ಎದುರಿನ ರಸ್ತೆಯಲ್ಲಿ ಸ್ನೇಹಿತೆ ಜೊತೆ ನಿಂತಿದ್ದರು. ಈ ವೇಳೆ  ಸ್ಕೂಟರ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳ ಪೈಕಿ ಹಿಂಬದಿ ಕುಳಿತಿದ್ದ ಒಬ್ಬ ಮಹಿಳೆಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. 
ಆದರೆ ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ, ಈ ವೇಳೆ ದುಷ್ಕರ್ಮಿಗಳು ಸ್ವಲ್ಪ ಮುಂದಕ್ಕೆ ಹೋಗಿ ಸ್ಕೂಟರ್‌ ನಿಲ್ಲಿಸಿ, ವಾಪಸ್‌ ಬಂದು ಮಹಿಳೆಯನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಿ ಕಿರುಕುಳ ನೀಡಿ ಸರ ಕಸಿದುಕೊಂಡು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾರೆ. 
ಈ ಇಡೀ ದೃಶ್ಯ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು , ರಾಜರಾಜೇಶ್ವರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆ ಹಿಡಿಯಲು ವಿಶೇಷ ತಂಡ ರಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com