ಮತದಾರರು 3 ಗಂಟೆಗಳೊಳಗಾಗಿ ಮತದಾನ ಮಾಡಿದ್ದರೆ, ಮಳೆ ಸಮಸ್ಯೆಯಿಂದ ದೂರ ಇರಬಹುದು ಎಂದು ತಿಳಿಸಿದ್ದಾರೆ.
ಈ ಬಾರಿ ಹಿಂದಿನಂತೆಯೇ ಸಾಮಾನ್ಯದಂತೆ ಪೂರ್ವ ಮಾನ್ಸೂನ್ ಆಗಮಿಸಿದ್ದು, ಕರ್ನಾಟಕ ಕರಾವಳಿ ತೀರ ಪ್ರದೇಶ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಅರೇಬಿಯಾ ಸಮುದ್ರ ಹಾಗೂ ಬಂಗಾಳದಲ್ಲಿ ಸೈಕ್ಲೋನ್ ಆಗಿರುವ ಪರಿಣಾಮ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಈ ಬಾರಿ ಮಾನ್ಸೂನ್ ಸಮಯಕ್ಕೆ ಸರಿಯಾಗಿ ರಾಜ್ಯಕ್ಕೆ ಬರಲಿದೆ. ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಿಂದಲೇ ಮಾನ್ಸೂರ್ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಎಲ್ಲೆಲ್ಲಿ ಮಳೆ...?
ದಕ್ಷಿಣದ ಆಂತರಿಕ ವಲಯ: ಬೆಂಗಳೂರು, ರಾಮನಗರ, ಕೋಲಾರ, ಮೈಸೂರು, ಮಂಡ್ಯದಲ್ಲಿ ಮಳೆಯಾಗಲಿದೆ.
ಕರಾವಳಿ ತೀರ ಪ್ರದೇಶ: ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಹಾಗೂ ಕಾರವಾರದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಮಲೆನಾಡು ಪ್ರದೇಶ: ಹಾಸನ್, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಇತರೆ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚುನಾವಣಾ ಪ್ರಚಾರಗಳಿಗೆ ಇನ್ನು ಕೇವಲ 1 ದಿನವಷ್ಟೇ ಬಾಕಿಯಿದೆ. ಮತ ಕ್ಷೇತ್ರಗಳ ಭೇಟಿಗೆ ಮಳೆಯಡ್ಡಿಯುಂಟಾಗಬಹುದು. ಎಲ್ಲಾ ಮತದಾರರಿಗೆ ಈಗಾಗಲೇ ನಮ್ಮ ಕಾರ್ಯಕರ್ತರು ಫೋನ್ ನಂಬರ್ ಗಳನ್ನು ನೀಡಿದ್ದು. ಪ್ರಚಾರ ಸಂದರ್ಭದಲ್ಲಿ ಭೇಟಿಯಾಗಲು ಸಾಧ್ಯವಾಗದೇ ಹೋದರೆ, ಮತದಾರರಿಗೆ ನಾವು ಕರೆ ಮಾಡಿ ಮತಯಾಚನೆ ಮಾಡುತ್ತೇವೆಂದು ಅಭ್ಯರ್ಥಿಯೊಬ್ಬರು ಹೇಳಿದ್ದಾರೆ.