ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್ ಐಟಿಯಿಂದ ಮತ್ತೊಬ್ಬ ಆರೋಪಿ ಬಂಧನ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹಳ್ಳಹಿಡಿಯುತ್ತಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ ತನಿಖೆ ನಡೆಸುತ್ತಿರುವ ಎಸ್ ಐ ಟಿ ಪೊಲೀಸರು ....
ಗೌರಿ ಲಂಕೇಶ್
ಗೌರಿ ಲಂಕೇಶ್
Updated on: 
ಬೆಂಗಳೂರು:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹಳ್ಳಹಿಡಿಯುತ್ತಿದೆ ಎಂಬ ಮಾತುಗಳು ಕೇಳಿ ಬಂದ ಬೆನ್ನಲ್ಲೇ  ತನಿಖೆ ನಡೆಸುತ್ತಿರುವ ಎಸ್ ಐ ಟಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ಮೂಲದ ಪ್ರವೀಣ್ ಅಲಿಯಾಸ್ ಸುಚಿತ್ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಈ ಮೊದಲು ಪ್ರವೀಣ್ ನನ್ನು ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸಲಾಗಿತ್ತು.
ಈ ಮೊದಲು ಕೆ.ಟಿ ನವೀನ್ ಕುಮಾರ್  ನನ್ನು ಬಂದಿಸಲಾಗಿತ್ತು. ಆತ ನೀಡದ ಮಾಹಿತಿ ಮೇರೆಗೆ ಪ್ರವೀಣ್ ಕುಮಾರ್ ನನ್ನು ಬಂಧಿಸಲಾಗಿದೆ. ಈ ಸಂಬಂಧ ದಾಖಲಾತಿಗಳನ್ನು 3ನೇ ಎಸಿಎಂಎಂ ಕೋರ್ಟ್ ಗೆ ಸಲ್ಲಿಸಿದ್ದು, ಪ್ರವೀಣ್ ಬಗ್ಗೆ ಮಾಹಿತಿ ಕಲೆ ಹಾಕುವಾಗ ಆತೆ ಈ ಮೊದಲು ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿತನಾಗಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಕೋರ್ಟ್ ನಿಂದ ಬಾಡಿ ವಾರಂಟ್ ಪಡೆದ ಎಸ್ ಐ ಟಿ ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ, ಆರೋಪಿ ಪ್ರವೀಣ್ ನವೀನ್ ಜೊತೆ ಪತ್ರಕರ್ತೆ ಗೌರಿ ಲಂಕೇಶ್ ಅವರ ರಾಜ ರಾಜೇಶ್ವರಿ ನಗರದ ಮನೆ ಬಳಿ ಹಲವಾರು ಬಾರಿ ಬಂದು ಎಂಟ್ರಿ ಮತ್ತು ಎಕ್ಸಿಟ್ ಮಾರ್ಗಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದನು ಎಂದು ಹೇಳಿರು ಪೊಲೀಸರು ಈ ಸಂಬಂದ ಆತನಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರವೀಣ್ ಬಗ್ಗೆ ನವೀನ್ ಕುಮಾರ್ ಹೆಚ್ಚಿನ ವಿಷಯವನ್ನು ತಿಳಿಸಿಲ್ಲ, ಆತನ ಹೆಸರು ಪ್ರವೀಣ್ ಹೌದೋ ಅಲ್ಲವೇ ಎಂಬ ಬಗ್ಗೆ ಖಚಿತತೆಯಿಲ್ಲ, ನವೀನ್ ಗಿಂತ ಪ್ರವೀಣ್ ಗೆ ಕೊಲೆ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2017ರ ಸೆಪ್ಟೆಂಬರ್ 5ರಂದು ನಡೆದಿದ್ದ ಹತ್ಯೆಗೆ ನವೀನ್ ಸಂಚು ರೂಪಿಸಿದ್ದ. ಆತನ ಜತೆಗೆ ಇನ್ನು ಹಲವರು ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದ್ದು, ಅವರನ್ನು ಪತ್ತೆ ಮಾಡುತ್ತಿದ್ದೇವೆ. ಸದ್ಯಕ್ಕೆ ನವೀನ್ ವಿರುದ್ಧ ಸುಮಾರು 550 ಪುಟಗಳ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ರಾಜರಾಜೇಶ್ವರಿನಗರದಲ್ಲಿರುವ ಗೌರಿ ಲಂಕೇಶ್‌ ಅವರ ಮನೆ ಬಳಿಯೇ ನವೀನ್ ಓಡಾಡಿದ್ದ. ಕೆಲ ಸಂಘಟನೆಗಳ ಮುಖಂಡರ ಮೊಬೈಲ್‌ ಸಂಭಾಷಣೆ ಆಲಿಸಿದಾಗ ಅದು ಗೊತ್ತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com