ನಗರದಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ನ್ಯಾಯಾಲಯ ಕಟ್ಟುನಿಟ್ಟಿನ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಪ್ರಸ್ತುತ ಕಸದ ನಿರ್ವಹಣೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ. ನಗರದಲ್ಲಿ 1.30 ಕೋಟಿ ಜನಸಂಖ್ಯೆ ಇದ್ದು, 29 ಲಕ್ಷ ಮನೆಗಳಿವೆ. ಇದರಲ್ಲಿ ಹೋಟೆಲ್, ಮಾಲ್ ಸೇರಿದಂತೆ 5 ಲಕ್ಷ ವಾಣಿಜ್ಯ ಕಟ್ಟಡಗಳಿವೆ. ನಗರದಲ್ಲಿ ಒಟ್ಟಾರೆ ನಿತ್ಯ 5,700 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಮನೆಗಳಿಂದ ತ್ಯಾಜ್ಯ ಸಂಗ್ರಹಣೆಗೆ 4,213 ಆಟೋ ಟಿಪ್ಪರ್ ಗಳು, ನಂತರ ಅದನ್ನು ತ್ಯಾಜ್ಯ ಸಂಸ್ಕರಣಾ ಘಟಗಳಿಗೆ ವಿಲೇವಾರಿ ಮಾಡಲು 566 ಕಾಂಪ್ಯಾಕ್ಟರ್ ಗಳನ್ನು ಗುತ್ತಿಗೆಗೆ ಪಡೆಯಲಾಗಿದೆ. 8 ಮೆಕ್ಯಾನಿಕಲ್ ಸ್ವೀಪಿಂಗ್ ವಾಹನಗಳನು ಕೂಡ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.