ಕೆಆರ್ ಎಸ್, ಕಬಿನಿಯಿಂದ ತಮಿಳುನಾಡಿಗೆ 330 ಟಿಎಂಸಿ ನೀರು ಬಿಟ್ಟ ಕರ್ನಾಟಕ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವಂತೆಯೇ ಇತ್ತ ಕರ್ನಾಟಕ ಸರ್ಕಾರ ಕಬಿನಿ ಮತ್ತು ಕೆಆರ್ ಎಸ್ ಡ್ಯಾಂ ಗಳಿದ ತಮಿಳುನಾಡಿಗೆ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವಂತೆಯೇ ಇತ್ತ ಕರ್ನಾಟಕ ಸರ್ಕಾರ ಕಬಿನಿ ಮತ್ತು ಕೆಆರ್ ಎಸ್ ಡ್ಯಾಂ ಗಳಿದ ತಮಿಳುನಾಡಿಗೆ ಭಾರಿ ಪ್ರಮಾಣದ ನೀರನ್ನು ಹರಿಸುತ್ತಿದೆ.
ದಶಕಗಳಿಂದಲೂ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದ್ದ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಈ ವರ್ಷ ಕೊಂಚ ರಿಲೀಫ್ ಸಿಕ್ಕಂತೆ ಕಾಣುತ್ತಿದೆ. ಕಾರಣ ಕೇರಳ, ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಕರ್ನಾಟಕದ ಕೆಆರ್ ಎಸ್ ಮತ್ತು ಕಬಿನಿ ಡ್ಯಾಂಗಳಿಗೆ ಉತ್ತಮ ಪ್ರಮಾಣದ ನೀರಿನ ಹರಿವಿದೆ. ಇದೇ ಕಾರಣಕ್ಕೆ 34 ವರ್ಷಗಳ ಬಳಿಕ ತಮಿಳುನಾಡಿಗೆ ಕಬಿನಿ ಡ್ಯಾಂ ನಿಂದ ಸುಮಾರು 176 ಟಿಎಂಸಿ ನೀರು ಬಿಡಲಾಗುತ್ತಿದ್ದು, ಕೆಆಎರ್ ಎಸ್ ನಿಂದ ಸುಮಾರು 163 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ.
ಪ್ರಮುಖವಾಗಿ ಕೇರಳ, ಕೊಡಗು ಪ್ರದೇಶದಲ್ಲಾದ ಉತ್ತಮ ಮಳೆಯಿಂದಾಗಿ ಡ್ಯಾಂಗಳ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಇದೇ ಕಾರಣಕ್ಕೆ ಈ ಹಿಂದಿನ ವರ್ಷಗಳಲ್ಲಿ ಹರಿಸಲಾಗಿದ್ದ ನೀರಿನ ಸುಮಾರು ಮೂರು ಪಟ್ಟು ನೀರನ್ನು ತಮಿಳುನಾಡಿಗೆ ಪ್ರಸ್ತುತ ಹರಿಸಲಾಗುತ್ತಿದೆ. ಅಲ್ಲದೆ ಕಳೆದ 34 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಕಳೆದ 2 ವಾರಗಳಿಂದ ಕಬಿನಿ ಡ್ಯಾನಿಂದ ಸುಮಾರು  80 ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ.  ಹೀಗಾಗಿ ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ಒಳಹರಿವು ಹೆಚ್ಚಾಗುತ್ತಿದ್ದು, ಮೆಟ್ಟೂರು ಡ್ಯಾಂ ಸುಮಾರು 93.47 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಉಳಿದ ಹೆಚ್ಚುವರಿ ನೀರು ಸಮುದ್ರ ಸೇರಲಿದೆ.
ತಮಿಳುನಾಡಿಗೆ ನೀರು ಬಿಟ್ಟ ಹೊರತಾಗಿಯೂ ರಾಜ್ಯಕ್ಕಿಲ್ಲ ನೀರಿನ ಸಮಸ್ಯೆ
ಇನ್ನು ತಮಿಳುನಾಡಿಗೆ ಭಾರಿ ಪ್ರಮಾಣದ ನೀರಿನ ಹರಿವಿನ ಹೊರತಾಗಿಯೂ ರಾಜ್ಯಕ್ಕೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ಮಾಹಿತಿ ನೀಡಿವೆ. 17.45 ಟಿಎಂಸಿ ಸಾಮರ್ಥ್ಯದ ಕಬಿನಿ ಜಲಾಶಯದಲ್ಲಿ ಈಗಾಗಲೇ 16.76 ಟಿಎಂಸಿ ನೀರಿದ್ದು, 6.95ಟಿಎಂಸಿಯ ಲೈವ್ ಸ್ಟೋರೇಜ್ ಸಾಮರ್ಥ್ಯವಿದೆ. ಇದು ರಾಜ್ಯದ ನೀರಾವರಿ ಮತ್ತು ಕುಡಿವ ನೀರಿನ ಸೌಲಭ್ಯಕ್ಕೆ ಸಾಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com