ರಸ್ತೆ ಗುಂಡಿಗಳನ್ನು ಮುಚ್ಚುವವರೆಗೂ ಬೆಂಗಳೂರಿಗರು ಎಲ್ಲಿಗೆ ಹೋಗಬೇಕು?: ಬಿಬಿಎಂಪಿಗೆ ಹೈಕೋರ್ಟ್

ಕಳೆದ ಮೂರು ವರ್ಷಗಳಿಂದ ಮಳೆ ಬೀಳುತ್ತಲೇ ಇದೆಯೇ? ನೀವು ರಸ್ತೆ ಗುಂಡಿಗಳನ್ನು ಮುಚ್ಚುವವರೆಗೂ ಬೆಂಗಳೂರಿಗರು ಎಲ್ಲಿಗೆ ಹೋಗಬೇಕು? ಎಂದು ಬಿಬಿಎಂಪಿಯನ್ನು ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಕಳೆದ ಮೂರು ವರ್ಷಗಳಿಂದ ಮಳೆ ಬೀಳುತ್ತಲೇ ಇದೆಯೇ? ನೀವು ರಸ್ತೆ ಗುಂಡಿಗಳನ್ನು ಮುಚ್ಚುವವರೆಗೂ ಬೆಂಗಳೂರಿಗರು ಎಲ್ಲಿಗೆ ಹೋಗಬೇಕು? ಎಂದು ಬಿಬಿಎಂಪಿಯನ್ನು ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದೆ. 
2015ರಲ್ಲಿ ಕೋರಮಂಗಲದ ನಾಲ್ವರು ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಪೀಠ ಬಿಬಿಎಂಪಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. 
ಕಳೆದ ಮೂರು ವರ್ಷಗಳಿಂದಲೂ ಮಳೆಯಾಗುತ್ತಲೇ ಇದೆಯೇ? ಬಿಬಿಎಂಪಿ ಅಧಿಕಾರಿಗಳು ಮೊದಲು ತಮ್ಮ ಕಾರ್ಯಕ್ಕೆ ಬದ್ಧರಾಗಿ, ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕೆಲಸಗಳಿಗೆ ಹಾಜರಾಗದ ಕಾರಣ ಸಮಸ್ಯೆಗಳು ಉದ್ಭವಿಸಿವೆ. ತುರ್ತು ಸಮಸ್ಯೆಗಳಿಗೆ ಅಧಿಕಾರಿಗಳ ಗಮನಹರಿಸುತ್ತಿಲ್ಲ. ಇದರ ಪರಿಣಾಮ ನಾಗರೀಕರು ಸಮಸ್ಯೆ ಎದುರಿಸುವಂತಾಗಿದೆ. ನಿಮ್ಮಲ್ಲಿರುವ ಕನ್ನಡಿಗಳ ಮೇಲಿನ ಧೂಳನ್ನು ಒರೆಸಿಕೊಂಡಿದ್ದೀರಿ. ಇದೀಗ ಪ್ರತಿಬಿಂಬ ಸ್ಪಷ್ಟವಾಗಿದೆ. ನಗರ ರಸ್ತೆಗಳ ಉತ್ತಮಗೊಳಿಸಿ ಬೆಂಗಳೂರಿಗರನ್ನು ಸಂತಸಪಡಿಸಲು ಇನ್ನೂ ನಿಮಗೆಷ್ಟು ಸಮಯಬೇಕು? ಎಂದು ಬಿಬಿಎಂಪಿ ಪರ ವಕೀಲೆ ವಿ. ಶ್ರೀನಿಧಿಯವರಿಗೆ  ಪ್ರಶ್ನಿಸಿದೆ. 
ಕೆಲ ಗುಂಡಿಗಳ ಮುಚ್ಚುವ ವೇಳೆ ಕೆಲ ಅಂಶಗಳು ಕಂಡು ಬಂದಿದ್ದು, ಸಂಬಂಧಪಟ್ಟಂತಹ ಬಿಬಿಎಂಪಿ ಮತ್ತು ಬಿಡಬ್ಲ್ಯೂಎಸ್ಎಸ್'ಬಿ ಅಧಿಕಾರಿಗಳೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕಾಗಿದೆ. ಈ ಕುರಿತಂತೆ ಶುಕ್ರವಾರದೊಳಗಾಗಿ ಸಲಹೆ ಹಾಗೂ ಪ್ರತಿಕ್ರಿಯೆಗಳನ್ನು ನೀಡಲಾಗುತ್ತದೆ ಎಂದು ಶ್ರೀನಿಧಿ ಪ್ರತಿಕ್ರಿಯೆ ನೀಡಿದರು. 
ಇದಲ್ಲದೆ, ಪ್ರತೀನಿತ್ಯ ನಡೆಸಲಾಗುತ್ತಿರುವ ಕಾರ್ಯಗಳ ಕುರಿತಂತೆಯೂ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಬಿಬಿಎಂಪಿ ಕಾರ್ಯಗಳ ಕುರಿತಂತೆ ನಾವು ಯಾವುದೇ ರೀತಿಯ ಟೀಕೆಗಳನ್ನು ಮಾಡುವುದಿಲ್ಲ. ಆದರೆ, ಅಧಿಕಾರಿಗಳು ಸಮಯಕ್ಕೆ ಕೆಲಸಕ್ಕೆ ಹಾಜರಾಗಿ, ಕಾರ್ಯಗಳನ್ನು ನಿರ್ವಹಿಸಬೇಕೆಂದು ನಿರೀಕ್ಷಿಸುತ್ತೇವೆಂದು ನ್ಯಾಯಾಲಯದ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com