ಸಹಪಾಠಿ ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ರವಾನೆ: ಆರೋಪಿ ಬಂಧನ

ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸುತ್ತಿದ್ದ ಆರೋಪಿಯೊಬ್ಬನನ್ನು ಅಸೋಕ ನಗರ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಹಾಗೂ ವಿಡಿಯೋ ಕಳುಹಿಸುತ್ತಿದ್ದ ಆರೋಪಿಯೊಬ್ಬನನ್ನು ಅಸೋಕ ನಗರ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ. 
ಭಾರ್ಗವ್.ಕೆ (21) ಬಂಧಿತ ವ್ಯಕ್ತಿಯಾಗಿದ್ದಾನೆ. ಅಶೋಕ ನಗರ ಠಾಣಾ ವ್ಯಾಪ್ತಿಯಲ್ಲಿರುವ ಪ್ರತಿಷ್ಠಿತ ಕಾಲೇಜೊಂದರ ಪ್ರಾಂಶುಪಾಲರು ನೀಡಿದ ದೂರಿನ ಮೇಲೆಗೆ ಪೊಲೀಸರು ಹಿಂದೂಪುರದಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 
ಬಂಧಿತ ಆರೋಪಿ ಆಂಧ್ರಪ್ರದೇಶದ ಹಿಂದೂಪುರ ಮೂಲದವನಾಗಿದ್ದು, ಈ ಹಿಂದೆ ಲಾಲ್ ಬಾಗ್ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಬಿಎ ಪದವಿ ಮಾಡುತ್ತಿದ್ದ. ಮೂರು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ ಈತ ಅರ್ಧಕ್ಕೆ ಕಾಲೇಜು ವ್ಯಾಸಾಂಗ ತ್ಯಜಿಸಿ ಪುನಃ ಹಿಂದೂಪುರಕ್ಕೆ ತೆರಳಿ ತಂದೆ ಜೊತೆಗೆ ಗುತ್ತಿಗೆ ಕಾಮಗಾರಿ ನೋಡಿಕೊಳ್ಳುತ್ತಿದ್ದ. 

ಇದರಂತೆ ಕಾಲೇಜಿನಲ್ಲಿ ಪರಿಚಯವಾಗಿದ್ದ ವಿದ್ಯಾರ್ಥಿನಿಯರಿಗೆ ಆರೋಪಿ ಊರಿನಿಂದ ಮೊಬೈಲ್ ನಲ್ಲಿ ಯುವತಿಯರ ಸೌಂದರ್ಯವನ್ನು ಹೊಗಳಿ ಸಂದೇಶಗಳನ್ನು ಕಳುಹಿಸುತ್ತಿದ್ದ. ನಂತರದ ದಿನಗಳಲ್ಲಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಆರಂಭಿಸಿ ಹಾಗೆಯೇ ವಿಡಿಯೋಗಳನ್ನು ಕಳುಹಿಸುತ್ತಿದ್ದ. ವಿದ್ಯಾರ್ಥಿನಿಯರಿಗೆ ಅವರ ಲೈಂಗಿಕ ಆಸಕ್ತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದ. ಬಳಿಕ ಪೊಲೀಸರಿಗೆ ದೂರು ನೀಡುವುದಾಗಿ ಯುವತಿಯರು ಎಚ್ಚರಿಸಿದ್ದಾರೆ. 

ಇದಾದ ಬಳಿಕ ನಕಲಿ ದಾಖಲೆಗಳನ್ನು ನೀಡಿ ಮತ್ತೊಂದು ಸಿಮ್ ಖರೀದಿಸಿದ್ದ ಆರೋಪಿ ಮತ್ತೆ ಯುವತಿಯರಿಗೆ ಕಿರುಕುಳ ನೀಡಲು ಆರಂಭಿಸಿದ್ದ. ಮುಖವನ್ನು ಮುಚ್ಚಿಕೊಂಡು ಯುವತಿಯರಿಗೆ ವಿಡಿಯೋ ಕರೆಗಳನ್ನು ಮಾಡುತ್ತಿದ್ದ. ನಗ್ನನಾಗಿ ಯುವತಿಯರಿಗೆ ವಿಡಿಯೋ ಮಾಡುತ್ತಿದ್ದ ಆರೋಪಿ ಲೈಂಗಿಕ ಕ್ರಿಯೆಗೆ ಬರುವಂತೆ ಆಹ್ವಾನಿಸುತ್ತಿದ್ದ. ಬಳಿಕ ವಿದ್ಯಾರ್ಥಿನಿಯರು ಮೊಬೈಲ್ ಸಂಖ್ಯೆ ಕುರಿತು ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದಾಗ ಸಿಮ್ ಗಂಗಾಧರ್ ಎಂಬುವವರ ಹೆಸರಿನಲ್ಲಿರುವುದು ತಿಳಿದುಬಂದಿದೆ. 

ಬಳಿಕ ವಿದ್ಯಾರ್ಥಿನಿಯರು ಭಾರ್ಗವ್ ವಿರುದ್ದ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ. ಬಳಿಕ ಪ್ರಾಂಶುಪಾಲರು ಅಶೋಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಬಳಿಕ ಫೋನ್ ನಂಬರ್ ಪರಿಶೀಲನೆ ನಡೆಸಿದಾಗ ಕರೆಗಳು ಹಿಂದೂಪುರದಿಂದ ಬರುತ್ತಿರುವುದು ಕಂಡು ಬಂದಿದೆ. ಇದರಂತೆ ಹಿಂದೂಪುರಕ್ಕೆ ತೆರಳಿದ ಪೊಲೀಸರ ತಂಡ ಭಾರ್ಗವ್ ನನ್ನು ಬಂಧನಕ್ಕೊಳಪಡಿಸಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com