ಬಿಬಿಎಂಪಿ ಅಧಿಕಾರಿಗೆ ಬೆದರಿಕೆ: ಗುತ್ತಿಗೆದಾರ ಬಂಧನ

ಕಾಮಗಾರಿ ಬಿಲ್ ತಡೆ ಹಿಡಿದ ಕಾರಣಕ್ಕೆ ಬಿಬಿಎಂಪಿಯ ಜಂಟಿ ಆಯುಕ್ತರಿಗೆ ಬೆದರಿಗೆ ಹಾಕಿದ ಆರೋಪದ ಮೇಲೆ ತ್ಯಾಜ್ಯ ನಿರ್ವಹಣೆ ಗುತ್ತಿದಾರನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕಾಮಗಾರಿ ಬಿಲ್ ತಡೆ ಹಿಡಿದ ಕಾರಣಕ್ಕೆ ಬಿಬಿಎಂಪಿಯ ಜಂಟಿ ಆಯುಕ್ತರಿಗೆ ಬೆದರಿಗೆ ಹಾಕಿದ ಆರೋಪದ ಮೇಲೆ ತ್ಯಾಜ್ಯ ನಿರ್ವಹಣೆ ಗುತ್ತಿದಾರನನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ. 
ವಿದ್ಯಾಣ್ಯಪುರದ ವೀರಭದ್ರಪ್ಪ ಲೇಔಟ್ ನಿವಾಸಿ ವಿ.ವೆಂಕಟೇಶ್ (34) ಬಂಧಿತ ಗುತ್ತಿಗೆದಾರನೆಂದು ಹೇಳಲಾಗುತ್ತಿದೆ. 
ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಕಚೇರಿ ಜಂಟಿ ಆಯುಕ್ತ ಹೆಚ್.ಬಾಲಶೇಖರ್ ನೀಡಿದ ದೂರಿನ ಮೇಲೆಗೆ, ಬೆದರಿಕೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ವೆಂಕಟೇಶ್ ಅವರನ್ನು ಬಂಧನಕ್ಕೊಳಪಡಿಸಲಾಗಿದೆ. 
ಜೆ.ಪಿ.ಪಾರ್ಕ್ ವಾರ್ಡ್ ನಂ.17ರ ತ್ಯಾಜ್ಯ ನಿರ್ವಹಣೆ ಗುತ್ತಿದಾರ ವೆಂಕಟೇಶ್ ಗುತ್ತಿಗೆ ಹಣದ ಬಿಲ್ ರೂ.51.65 ಮತ್ತು ರೂ.12.23 ಲಕ್ಷ ಸೇರಿ ಒಟ್ಟು ರೂ.63.88 ಲಕ್ಷ ಮೊಲ್ಯದ ಎರಡು ಬಿಲ್ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಿ ಕಡತವನ್ನು ಅನುಮೋದನೆಗೆ ನೀಡಿದ್ದ.

ಕಡತಗಳಲ್ಲಿ ಆ.2ರಂದು ತಯಾರಿಸಲಾದ ಆದೇಶ ಮತ್ತು ಡಿಸಿ ಬಿಲ್ಲುಗಳಲ್ಲಿ ನಿವೃತ್ತ ಅಧಿಕಾರಿ ಸಹಿ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಜಂಟಿ ಆಯುಕ್ತರು ಕಡತಗಳನ್ನು ತಡೆಹಿಡಿದಿದ್ದರು. ಇದರಂತ ಕುಪಿತಗೊಂಡ ವೆಂಕಟೇಶ್, ತನ್ನ ಸಹಚರರ ಜೊತೆಗೂಡಿ ಅ.3 ರಂದು ರಾಜರಾಜೇಶ್ವರಿನಗರ ವಲಯ ಕಚೇರಿಗೆ ಹೋಗಿ ಒತ್ತಡ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಯುಂಟು ಮಾಡಿದ್ದಾನೆ. 

ಬಳಿಕ ಅ.5 ರಂದು ಬೆಳಿಗ್ಗೆ 9.30ರಲ್ಲಿ ಜಂಟಿ ಆಯುಕ್ತ ಬಾಲಶೇಖರ್ ಮನೆಗೆ ತನ್ನ ಗ್ಯಾಂಗ್ ಜೊತೆ ಹೋಗಿರುವ ಆರಿಪಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಡತಗಳನ್ನು ನೀಡುವಂತೆ ಒತ್ತಾಯ ಮಾಡಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com