ಬೆಂಗಳೂರು: ಸಿಲಿಂಡರ್​ ಸ್ಫೋಟಗೊಂಡು ದಂಪತಿ ಸಾವು

ಎಲ್ ಪಿಜಿ ಸಿಲಿಂಡರ್​ ಸ್ಫೋಟಗೊಂಡು ದಂಪತಿ ಮೃತಪಟ್ಟ ದಾರುಣ ಘಟನೆ ಬುಧವಾರ ವಿಜಯನಗರ...
ಮೃತ ದಂಪತಿ
ಮೃತ ದಂಪತಿ
ಬೆಂಗಳೂರು: ಎಲ್ ಪಿಜಿ ಸಿಲಿಂಡರ್​ ಸ್ಫೋಟಗೊಂಡು ದಂಪತಿ ಮೃತಪಟ್ಟ ದಾರುಣ ಘಟನೆ ಬುಧವಾರ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡಲಪಾಳ್ಯದಲ್ಲಿ ನಡೆದಿದೆ.
ಮೃತ ದಂಪತಿ ಶಿವಣ್ಣ(55) ಹಾಗೂ ಮಂಗಮ್ಮ(45) ಎಂದು ಗುರುತಿಸಲಾಗಿದ್ದು, ಮೂಲತಃ ತಮಿಳುನಾಡಿನವರು. ಮೂಡಲಪಾಳ್ಯದಲ್ಲಿ ವಾಸವಾಗಿದ್ದರು.
ಶೀಟಿನ ಮನೆಯಲ್ಲಿ ಗ್ಯಾಸ್​ ಸೋರಿಕೆಯಾಗಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರೊಳಗೆ ದಂಪತಿಗಳು ಬೆಂದು ಹೋಗಿದ್ದರು.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com