ರೈತರಿಗೆ ಕಿರುಕುಳ ನೀಡುವ ಖಾಸಗಿ ಫೈನಾನ್ಸಿಯರ್'ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಪೊಲೀಸರಿಗೆ ಸೂಚನೆ

ಸಾಲ ನೀಡಿ ರೈತರಿಗೆ ಕಿರುಕುಳ ನೀಡಿರುವ ಖಾಸಗಿ ಫೈನಾನ್ಸಿಯರ್'ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಪೊಲೀಸರಿಗೆ ಸೂಚಿಸಿದೆ ಎಂದು ಬುಧವಾರ ತಿಳಿದುಬಂದಿದೆ...
ಸಂಗ್ರಹ ಚಿತ್ರd
ಸಂಗ್ರಹ ಚಿತ್ರd
ಬೆಂಗಳೂರು: ಸಾಲ ನೀಡಿ ರೈತರಿಗೆ ಕಿರುಕುಳ ನೀಡಿರುವ ಖಾಸಗಿ ಫೈನಾನ್ಸಿಯರ್'ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಪೊಲೀಸರಿಗೆ ಸೂಚಿಸಿದೆ ಎಂದು ಬುಧವಾರ ತಿಳಿದುಬಂದಿದೆ. 
ಈ ಕುರಿತು ಸುತ್ತೋಲೆ ಹೊರಡಿಸಿರುವ ಡಿಜಿ ಹಾಗೂ ಐಜಿಪಿ ನೀಲಮಣಿ ಎನ್ ರಾಜು ಅವರು, ಸಾಲ ಕೊಟ್ಟು ರೈತರಿಗೆ ಕಿರುಕುಳ ನೀಡುವ ಖಾಸಗಿ ಫೈನಾನ್ಸಿಯರ್'ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಮುಖ್ಯ ಠಾಣೆಗಳಿಗೆ ಸೂಚಿಸಿದ್ದಾರೆ. 
ಸಾಲ ಮರುಪಾವತಿಸಲು ಅಪಾರ ಬಡ್ಡಿ ತೆಗೆದುಕೊಳ್ಳುತ್ತಿರುವ, ರೈತರಿಗೆ ಕಿರುಕುಳ ನೀಡುತ್ತಿರುವ ಯಾವುದೇ ಬಗೆಯ ದೂರುಗಳನ್ನು ನಿರ್ಲಕ್ಷಿಸಬಾರದು. ಇಂತಹ ಪ್ರಕರಣಗಳ ಸಂಬಂಧ ಪೊಲೀಸರು ಸ್ವಯಂ ಪ್ರೇರಿತ ದೂರುಗಳನ್ನು ದಾಖಲಿಸಿಕೊಳ್ಳಬೇಕು. ದೂರು ದಾಖಲಿಸಿದ ಬಳಿಕ ಸಾಲ ನೀಡಿದವರು ಹೆಚ್ಚು ಬಡ್ಡಿ ಪಡೆಯುತ್ತಿದ್ದಾರೆಯೇ ಹಾಗೂ ಇನ್ನಿತರೆ ಮಾಹಿತಿಗಳನ್ನು ಪೊಲೀಸರು ಸಂಗ್ರಹಿಸಲೇಬೇಕು. ಈ ಕುರಿತು ಎಲ್ಲಾ ಜಿಲ್ಲೆಗಳಲ್ಲೂ 24 ಗಂಟೆಗಳ ಸಹಾಯವಾಣಿಯನ್ನು ತೆರೆಯಬೇಕು. ಸಹಾಯವಾಣಿ ಕೇಂದ್ರದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರ್ಯಾಂಕ್ ನ ಅಧಿಕಾರಿಯೊಬ್ಬರು ಇರಬೇಕು. 
ದೂರು ದಾಖಲಾದ ಕೂಡಲೇ ಠಾಣಾದಿಕಾರಿಗಳು ಆಯಾ ಜಿಲ್ಲೆಗಳ ಎಸ್'ಪಿಗಳಿಗೆ ಮಾಹಿತಿ ನೀಡಬೇಕು. ಈ ಕುರಿತ ಪ್ರಕರಣಗಳ ಸಂಬಂಧ ನಗರ ಡಿಸಿಪಿಗಳು ವಿಳಂಬ ನೀತಿಗಳನ್ನು ಅನುಸರಿಸಬಾರದು. ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಕರಣಗಳ ಸಂಬಂಧ ಪತ್ರಿಕೆ, ಟಿವಿ ಮಾಧ್ಯಗಳು ಹಾಗೂ ಸಾಮಾಜಿಕ ಜಾಲಗಳಲ್ಲಿ ಸುದ್ದಿ ಪ್ರಕಟಿಸಬೇಕೆಂದು ಸೂತ್ತೋಲೆಯಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com