ಕಳೆಗುಂದಿದ ಆರ್'ಟಿಒ: ವಾಹನ ನೋಂದಣಿ ಸಂಖ್ಯೆ ಇಳಿಮುಖ, ಆದಾಯವೂ ಕುಂಠಿತ

ರಾಜ್ಯದಲ್ಲಿರುವ ವಿವಿಧ ಆರ್'ಟಿಒ ಕಚೇರಿಗಳಲ್ಲಿ ನೋಂದಣಿ ಆಗುತ್ತಿರುವ ವಾಹನಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆದಾಯವೂ ಕುಂಠಿತ ಕಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ರಾಜ್ಯದಲ್ಲಿರುವ ವಿವಿಧ ಆರ್'ಟಿಒ ಕಚೇರಿಗಳಲ್ಲಿ ನೋಂದಣಿ ಆಗುತ್ತಿರುವ ವಾಹನಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆದಾಯವೂ ಕುಂಠಿತ ಕಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ದಂಡ ವಸೂಲಿಗಿಂತಲೂ ವಾಹನ ನೋಂದಣಿಯಿಂದಲೇ ಹೆಚ್ಚೆಚ್ಚು ಆದಾಯ ಪಡೆಯುತ್ತಿದ್ದ ನಗರದ ಸಾರಿಗೆ ಇಲಾಖೆ ಕೇವಲ ವಾಹನ ನೋಂದಣಿಯಿಂದಲೇ ವರ್ಷಕ್ಕೆ ರೂ.3,420 ಕೋಟಿ ಆದಾಯ ಪಡೆಯುತ್ತಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ರೂ.105 ಕೋಟಿ ಆದಾಯ ಬಂದಿರುವುದಾಗಿ ತಿಳಿದುಬಂದಿದೆ. ಇದರ ಪರಿಣಾಮ ಇಲಾಖೆ ಶೇ.13 ರಷ್ಟು ಮಾತ್ರವೇ ತನ್ನ ಗುರಿ ಮುಟ್ಟಿದಂತಾಗಿದೆ. 
ನಗರದಲ್ಲಿ ಒಟ್ಟು 12 ಆರ್'ಟಿಒ ಕಚೇರಿಗಳಿವೆ. ರಾಜ್ಯದಾದ್ಯಂತ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ಬಂದಿರುವ ಆದಾಯ ರೂ.6,64 ಕೋಟಿಯಾಗಿದೆ. ಇಷ್ಟು ಮಟ್ಟದ ಸಾಧನೆಯನ್ನು ಎಂದಿಗೂ ನಾನು ನೋಡಿರಲಿಲ್ಲ. ಕೇವಲ ನೋಂದಾವಣಿಯಿಂದಲೇ ಹೆಚ್ಚು ಆದಾಯ ಬರುತ್ತಿತ್ತು. ಆದರೆ, ಈ ಬಾರಿ ನೋಂದಾವಣಿಯಿಂದ ಬಂದಿರುವ ಆದಾಯ ಅತ್ಯಂತ ಕಡಿಮೆಯಾಗಿದೆ. ನೋಂದಾವಣಿಯಿಂದ ಬರುವ ಹಣವೇ ಇಲಾಖೆಯ ದೊಡ್ಡ ಆದಾಯವಾಗಿತ್ತು ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಆರ್ಥಿಕತೆ ಕುಂದಿರುವ ಹಿನ್ನೆಲೆಯಲ್ಲಿ ಆಟೋ ಮೊಬೈಲ್ ಕ್ಷೇತ್ರ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ಪರಿಣಾಮ ಹೆಚ್ಚಿನ ಸಂಖ್ಯೆಯ ನಾಗರೀಕರು ತಮ್ಮ ಹಳೆಯ ವಾಹನಗಳನ್ನೇ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ, ಜನರು ಬಳಕೆ ಮಾಡಿರುವ ವಾಹನಗಳನ್ನೇ ಖರೀದಿ ಮಾಡಲು ಇಚ್ಛಿಸುತ್ತಿದ್ದಾರೆಂದು ನಗರ ತಜ್ಞ ವಿ.ರವಿಚಂದರ್ ಅವರು ಹೇಳಿದ್ದಾರೆ. 
ಜನರು ವಾಹನ ಖರೀದಿ ಮಾಡದಿದ್ದರೆ ಅದು ಸಾರಿಗೆ ಇಲಾಖೆಯ ಆದಾಯದ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೆರಿಯವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com