'ಡಿ' ಬಾಸ್ ಮತ್ತೆ ಪತ್ನಿ ಮೇಲೆ ಹಲ್ಲೆ: ರವಿ ಬೆಳೆಗೆರೆ ಹೇಳಿದ್ದೇನು? 

ಬಾಕ್ ಆಫೀಸ್ ಸುಲ್ತಾನ,  ಚಾಲೆಂಜಿಂಗ್ ಸ್ಟಾರ್  ನಟ ದರ್ಶನ್  ಮತ್ತೆ ತಮ್ಮ ಹೆಂಡತಿ ವಿಜಯಲಕ್ಷ್ಮಿ ಮೇಲೆ  ಹಲ್ಲೆ ಮಾಡಿದ್ದಾರೆ ಎಂದು ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಹೇಳಿದ್ದಾರೆ.
ರವಿಬೆಳೆಗೆರೆ
ರವಿಬೆಳೆಗೆರೆ
Updated on

ಬೆಂಗಳೂರು: ಬಾಕ್ ಆಫೀಸ್ ಸುಲ್ತಾನ,  ಚಾಲೆಂಜಿಂಗ್ ಸ್ಟಾರ್  ನಟ ದರ್ಶನ್  ಮತ್ತೆ ತಮ್ಮ ಹೆಂಡತಿ ವಿಜಯಲಕ್ಷ್ಮಿ ಮೇಲೆ  ಹಲ್ಲೆ ಮಾಡಿದ್ದಾರೆ ಎಂದು ಹಿರಿಯ ಪತ್ರಕರ್ತ ರವಿ ಬೆಳೆಗೆರೆ ಹೇಳಿದ್ದಾರೆ.

ಕೆಲ ವರ್ಷಗಳ ಹಿಂದೆ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ಜೈಲಿಗೂ ಹೋಗಿ ಬಂದಿದ್ದ ದರ್ಶನ್ ಗೆ ಬುದ್ದಿ ಬಂದಿಲ್ಲ. ಇತ್ತೀಚಿಗೆ ಕುಡಿದು ಬಂದು ಅಪಾರ್ಟ್ ಮೆಂಟ್ ನಲ್ಲಿದ್ದ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಬಿಡಿಸಲು ಹೋದ ಹಾಸ್ಯ ನಟ ರವಿಶಂಕರ್ ನನ್ನು ಥಳಿಸಿದ್ದಾರೆ ಎಂದು ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ರವಿ ಬೆಳೆಗೆರೆ ಹೇಳಿದ್ದಾರೆ.

ವಿಜಯಲಕ್ಷ್ಮಿ ಹೆಸರಿನಲ್ಲಿ ದರ್ಶನ್ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಅದನ್ನು ವಾಪಾಸ್ ಕೊಡುವಂತೆ ಈಗ ಒತ್ತಾಯಿಸುತ್ತಿದ್ದಾರೆ. ಆದರೆ, ವಿಜಯಲಕ್ಷ್ಮಿ ಕೊಡುತ್ತಿಲ್ಲ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಈ ವಿಚಾರವನ್ನು ವಿಜಯಲಕ್ಷ್ಮಿ ಬೇರೊಬ್ಬರಲ್ಲಿ ಹೇಳಿರುವ ಬಗ್ಗೆ ಮಾಹಿತಿ ದೊರೆತಿದೆ.ದೊಡ್ಡ ನಟರಾಗಿರುವ ಅಪಾರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ , ತಮ್ಮ ಪತ್ನಿ ಮೇಲೆ ಹಲ್ಲೆ ಮಾಡುವುದನ್ನು ನಿಲ್ಲಿಸಬೇಕೆಂದು ಪ್ರೀತಿಯಿಂದ ಒತ್ತಾಯಿಸುವುದಾಗಿ ರವಿಬೆಳೆಗೆರೆ ಹೇಳಿದ್ದಾರೆ.

 ಇತ್ತೀಚೆಗಷ್ಟೇ ವರಮಹಾಲಕ್ಷ್ಮಿ ಹಬ್ಬದ ದಿನ ಚಾಲೆಂಜಿಂಗ್ ಸ್ಟಾರ್ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆಂಬ ಸುದ್ದಿ ಹರಿದಾಡಿತ್ತು. ಅಲ್ಲದೇ, ಟ್ವಿಟರ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಅಂತಿದ್ದ ಹೆಸರನ್ನ ವಿಜಯಲಕ್ಷ್ಮಿ ಅಂತಷ್ಟೇ ಚೇಂಜ್ ಮಾಡಿದ್ದು, ಹಲವು ಅನುಮಾನಕ್ಕೆ ಎಡೆಮಾಡಿ ಕೊಟ್ಟಿತ್ತು. ಆದ್ರೆ ವಿಜಯಲಕ್ಷ್ಮಿ ಟ್ವೀಟ್ ಮಾಡಿ, ಇದೆಲ್ಲ ಗಾಳಿ ಸುದ್ದಿ ಇದನ್ನೆಲ್ಲ ನಂಬಬೇಡಿ ಎಂದು ಹೇಳಿದ್ರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com