ಚಿಕ್ಕೋಡಿ ಪೊಲೀಸರ ಭರ್ಜರಿ ಭೇಟೆ; ಅಂತಾರಾಜ್ಯ ಕಳ್ಳರ ಗ್ಯಾಂಗ್ ಬಂಧನ

ಮನೆ ಬೀಗ ಮುರಿದು ಚಿನ್ನ, ಬೆಳ್ಳಿ, ಹಣ ಕಳ್ಳತನ ಮಾಡುತಿದ್ದ ಅಂತರಾಜ್ಯ ಕಳ್ಳರನ್ನು ಚಿಕ್ಕೋಡಿ ಪೊಲೀಸರು ಬಂಧನ ಮಾಡಿದ ಘಟನೆ ನಡೆದಿದೆ. 
ಅಂತಾರಾಜ್ಯ ಕಳ್ಳರ ಗ್ಯಾಂಗ್ ಬಂಧನ
ಅಂತಾರಾಜ್ಯ ಕಳ್ಳರ ಗ್ಯಾಂಗ್ ಬಂಧನ
Updated on

ಚಿಕ್ಕೋಡಿ: ಮನೆ ಬೀಗ ಮುರಿದು ಚಿನ್ನ, ಬೆಳ್ಳಿ, ಹಣ ಕಳ್ಳತನ ಮಾಡುತಿದ್ದ ಅಂತರಾಜ್ಯ ಕಳ್ಳರನ್ನು ಚಿಕ್ಕೋಡಿ ಪೊಲೀಸರು ಬಂಧನ ಮಾಡಿದ ಘಟನೆ ನಡೆದಿದೆ. 

ಚಿಕ್ಕೋಡಿ ಪೊಲೀಸರ ಕಾರ್ಯಾಚರಣೆಯಿಂದ ಇಬ್ಬರು ಅಂತರಾಜ್ಯ ಕಳ್ಳರ ಬಂಧಿಸಿದ್ದು, ಮಹಾರಾಷ್ಟ್ರ ದ ಕೊಲ್ಲಾಪುರದ ಮೂಲದವರಾದ ವಿಶಾಲ ಶೇರಖಾನೆ(39 ವರ್ಷ) ಹಾಗೂ ಅಜರುದ್ದಿನ್ ಅರಬ್(33 ವರ್ಷ|) ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಕಳ್ಳರಿಂದ 240 ಗ್ರಾಂ ಚಿನ್ನದ ಆಭರಣಗಳು ಹಾಗೂ 200 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದಲ್ಲದೆ ಒಂದು ಅಲ್ಟೊ ಕಾರು ಹಾಗೂ ಎರಡು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕಳ್ಳರಿಂದ ರೂ 14 ಲಕ್ಷ 57 ಸಾವಿರ ರೂಪಾಯಿ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com