ಮೈಸೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ, ಇಬ್ಬರು ಮಹಿಳೆಯರ ರಕ್ಷಣೆ

ಮೈಸೂರು ನಗರ ಅಪರಾಧ ದಳ-ಸಿಸಿಬಿ ಪೊಲೀಸರು ಖಚಿತ ಮಾಹಿತಿ ಅನುಸರಿಸಿ ನಗರದ ‘ರೆಡ್ ರೋಸ್ ಮಸಾಜ್ ಪಾರ್ಲರ್’ ಮೇಲೆ ದಾಳಿ ನಡೆಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಮೈಸೂರು ನಗರ ಅಪರಾಧ ದಳ-ಸಿಸಿಬಿ ಪೊಲೀಸರು ಖಚಿತ ಮಾಹಿತಿ ಅನುಸರಿಸಿ ನಗರದ ‘ರೆಡ್ ರೋಸ್ ಮಸಾಜ್ ಪಾರ್ಲರ್’ ಮೇಲೆ ದಾಳಿ ನಡೆಸಿ, ಮಸಾಜ್ ಹೆಸರಿನಲ್ಲಿ ವೇಶ್ಯವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಶಿವರಾಜ್ (28) ಹಾಗೂ ಮಹದೇವ್(32) ಎಂದು ಗುರುತಿಸಲಾಗಿದೆ. 
ದಂಧೆಯಲ್ಲಿ ಸಂಗ್ರಹಿಸಿದ್ದ 12,570 ರು. ನಗದು ಹಾಗೂ 5 ಮೊಬೈಲ್ ಪೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನೇಪಾಳ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರನ್ನು ತಲೆಹಿಡುಕರ ಹಿಡಿತದಿಂದ ರಕ್ಷಿಸಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಎಸಿಪಿ ಬಿ.ಆರ್.ಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com