ಬೆಂಗಳೂರು: 13ನೇ ಮಹಡಿಯಿಂದ ಕೆಳಗೆ ಹಾರಿ ಟೆಕ್ಕಿ ಆತ್ಮಹತ್ಯೆ

31 ವರ್ಷದ ಟೆಕ್ಕಿಯೊಬ್ಬ ತನ್ನ ಕಚೇರಿಯ 13ನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ...
ಒಳ ಚಿತ್ರದಲ್ಲಿ ಬರ್ಮನ್
ಒಳ ಚಿತ್ರದಲ್ಲಿ ಬರ್ಮನ್
Updated on: 

ಬೆಂಗಳೂರು:31 ವರ್ಷದ ಟೆಕ್ಕಿಯೊಬ್ಬ ತನ್ನ ಕಚೇರಿಯ 13ನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹದೇವಪುರದ ಬಗ್ಮನೆ ಟೆಕ್ ಪಾರ್ಕ್ ನಲ್ಲಿ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮೃತ ಟೆಕ್ಕಿಯನ್ನು ಅಮ್ಲನ್ ಬರ್ಮನ್ ಎಂದು ಗುರುತಿಸಲಾಗಿದ್ದು ಈಗ ಅಸ್ಸಾಂ ಮೂಲದವರಾಗಿದ್ದು ಬೆಂಗಳೂರಿಗೆ ನಾಲ್ಕು ವರ್ಷಗಳ ಹಿಂದೆ ಬಂದಿದ್ದರು. ಮಾರತಹಳ್ಳಿ ಸಮೀಪ ಶಿವಗಂಗಾ ಲೇ ಔಟ್ ನಲ್ಲಿ ತನ್ನ ತಾಯಿ ಶಿಖಾ ಬರ್ಮನ್ ಜೊತೆ ವಾಸವಾಗಿದ್ದರು. ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಯಲ್ಲಿ ಸೀನಿಯರ್ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಕಚೇರಿಗೆ ಎಂದಿನಂತೆ ಬಂದಿದ್ದರು. ನಾಲ್ಕನೇ ಮಹಡಿಯ ತನ್ನ ಕಚೇರಿಯಲ್ಲಿ ಕುಳಿತಿದ್ದು ಮಧ್ಯಾಹ್ನ 12.49ರ ಸುಮಾರಿಗೆ ಎದ್ದು 13ನೇ ಮಹಡಿಗೆ ಮೇಲೆ ಹೋಗಿದ್ದರು. ಮಧ್ಯಾಹ್ನ 1.15ರ ಸುಮಾರಿಗೆ ಮಹಡಿಯ ಮೇಲಿನಿಂದ ಕೆಳಗೆ ಬಿದ್ದ ಶಬ್ದ ಅಲ್ಲಿ ನೆರೆದಿದ್ದವರಿಗೆ ಕೇಳಿಸಿತು. ಭದ್ರತಾ ಸಿಬ್ಬಂದಿ ಹೋಗಿ ನೋಡಿದಾಗ ಬರ್ಮನ್ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದರು. ಕೂಡಲೇ ಪೊಲೀಸರಿಗೆ ದೂರು ನೀಡಲಾಯಿತು. ಕಚೇರಿ ಆವರಣದಲ್ಲಿ ಆತಂಕದ ವಾತಾರವಣ ನಿರ್ಮಾಣವಾಗಿತ್ತು.

ಬರ್ಮನ್ ಅವಿವಾಹಿತರಾಗಿದ್ದು ವರ್ಷದ ಹಿಂದೆ ಕಂಪೆನಿಗೆ ಕೆಲಸಕ್ಕೆ ಸೇರಿದ್ದರು. ತಂದೆ ತೀರಿಕೊಂಡ ಮೇಲೆ ಖಿನ್ನತೆಗೆ ಗುರಿಯಾಗಿದ್ದ ಬರ್ಮನ್ ಅದಕ್ಕಾಗಿ ವೈದ್ಯರ ಔಷಧಿ ತೆಗೆದುಕೊಳ್ಳುತ್ತಿದ್ದರು. ಕಳೆದ ಮಂಗಳವಾರ ಅಗತ್ಯಕ್ಕಿಂತ ಹೆಚ್ಚು ಔಷಧಿ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನ ಆಫೀಸಿಗೆ ಕೆಲಸಕ್ಕೆ ಬಂದಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com