ನಾಲ್ಕು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಪ್ರಮುಖ ಬೆಳವಣಿಗೆಯಲ್ಲಿ ಸಿಎಂ ಕುಮಾರಸ್ವಾಮಿ ನೇತ್ರತ್ವದ ಸಮ್ಮಿಶ್ರ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಪ್ರಮುಖ ಬೆಳವಣಿಗೆಯಲ್ಲಿ  ಸಿಎಂ ಕುಮಾರಸ್ವಾಮಿ ನೇತ್ರತ್ವದ ಸಮ್ಮಿಶ್ರ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನಾಲ್ವರು ಅಧಿಕಾರಿಗಳ ಪೈಕಿ ಕೆಲವರಿಗೆ ಬಡ್ತಿಯನ್ನು ನೀಡಿ ವರ್ಗಾವಣೆ ಮಾಡಲಾಗಿದ್ದು, ಹುಬ್ಬಳ್ಳಿ- ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ಬಿ.ಎಸ್.ಲೋಕೇಶ್ ರನ್ನು ನೇಮಕ ಮಾಡಲಾಗಿದೆ. ಅಂತೆಯೇ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅವರನ್ನು ನೇಮಕ ಮಾಡಲಾಗಿದೆ. 
ಇನ್ನು ಕೆಜಿಎಫ್ ಎಸ್ಪಿ ಆಗಿದ್ದ ಬಿ.ಎಸ್.ಲೋಕೇಶ್ ಅವರಿಗೆ  ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಅಂತೆಯೇ ಗುಪ್ತಚರ ಇಲಾಖೆ ಎಸ್ಪಿ ಆಗಿದ್ದ ಕೆ.ಟಿ.ಬಾಲಕೃಷ್ಣ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಬೆಳಗಾವಿ ನಗರದ ಪೊಲೀಸ್ ಆಯುಕ್ತರಾಗಿ ಪಿ.ರಾಜೇಂದ್ರ ಪ್ರಸಾದ್ ಅವರನ್ನು, ಬೆಂಗಳೂರಿನಲ್ಲಿ ವೈರ್ಲೆಸ್ ವಿಭಾಗದ ಎಸ್ಪಿ ಆಗಿದ್ದ ರಾಜೇಂದ್ರ ಪ್ರಸಾದ್ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಯೋಜನೆ‌ ಹಾಗು ಆಧುನಿಕರಣ ವಿಭಾಗದ ಡಿಐಜಿಯಾಗಿ ಆರ್.ರಮೇಶ್ ಅವರನ್ನು ನೇಮಕ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com