ಬೆಂಗಳೂರು: ಮಗ ಬೇಡ ಬೇಡ ಅಂದರೂ ಕುತ್ತಿಗೆಗೆ ನೇಣು ಬಿಗಿದು ಹತ್ಯೆ ಮಾಡಿದ ಕ್ರೂರಿ ತಂದೆ, ಮನಕಲಕುವ ದೃಶ್ಯ!

ಮಗ ಬೇಡ ಬೇಡ ಅಂತ ಗೋಗರೆದರೂ ಕರುಣಿಸದ ಪಾಪಿ ತಂದೆ ಆತನ ಕುತ್ತಿಗೆಗೆ ನೇಣು ಬಿಗಿದು ಹತ್ಯೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಮಗ ಬೇಡ ಬೇಡ ಅಂತ ಗೋಗರೆದರೂ ಕರುಣಿಸದ ಪಾಪಿ ತಂದೆ ಆತನ ಕುತ್ತಿಗೆಗೆ ನೇಣು ಬಿಗಿದು ಹತ್ಯೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಲಗಾರರ ಕಾಟಕ್ಕೆ ಬೇಸತ್ತ ಬೆಂಗಳೂರಿನ ಹೆಚ್ ಎಎಲ್ ನ ವಿಭೂತಿಪುರದ ನಿವಾಸಿ ಸುರೇಶ್ ಎಂಬಾತ ತನ್ನ ಮಗನಿಗೆ ನೇಣು ಹಾಕುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಇನ್ನು ಮಗನ ಸಾವಿನ ನೋವಿನಿಂದ ನೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಪೊಲೀಸರು ವಿಚಾರಣೆ ನಡೆಸಿದಾಗ ಸುರೇಶ್ ತಾವು ವಿಭೂತಿಪುರದ ಫೈನ್ಸಾಶಿಯರ್ ಸುಧಾ ಎಂಬುವರಿಂದ ಎರಡು ವರ್ಷಗಳ ಹಿಂದೆ 40 ಸಾವಿರ ರು. ಸಾಲ ತೆಗೆದುಕೊಂಡಿದ್ದೆ. ಕೆಲವು ದಿನಗಳ ಹಿಂದೆ ಬಡ್ಡಿ ಸಮೇತ ಸಾಲ ತೀರಿಸಿದ್ದರು. ಸುಧಾ ಕಡೆಯವರು ಬಂದು ನನ್ನ ಪತ್ನಿ ಹಾಗೂ ಮಗನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಹೋಗಿದ್ದರು. ಇದರಿಂದ ನಿನ್ನೆ ಗೀತಾಬಾಯಿ ಪತಿ ಮತ್ತು ಮಗನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದನು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com