ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!

ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ನ್ನು ಸೃಷ್ಟಿಸಿತ್ತು.
ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!
ಬೆಂಗಳೂರು: ಈ ಸಲೂನ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರ ಉಚಿತ!
Updated on
ಪಾಕಿಸ್ತಾನಿ ಯೋಧರ ಪ್ರಶ್ನೆಗಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಮೀಸೆ ಸಿಲಿಕಾನ್ ಸಿಟಿಯಲ್ಲಿ ಹೊಸ ಟ್ರೆಂಡ್ ನ್ನು ಸೃಷ್ಟಿಸಿತ್ತು. ಈ ಬೆನ್ನಲ್ಲೇ  ಬೆಂಗಳೂರಿನಲ್ಲಿರುವ ಸಲೂನ್ ಶಾಪ್ ನಲ್ಲಿ ಅಭಿನಂದನ್ ಮೀಸೆ ಶೈಲಿಯ ಕ್ಷೌರವನ್ನು ಉಚಿತವಾಗಿ ಮಾಡಲಾಗುತ್ತಿದೆ.
ಅಭಿನಂದನ್ ಮಾದರಿಯಲ್ಲಿ ಗನ್‌ ಸ್ಲಿಂಗರ್‌ ಮೀಸೆಯ ಮಾದರಿಯಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ವರೆಗೂ ಅಭಿನಂದನ್ ಶೈಲಿಯಲ್ಲಿ 640 ಜನರು ಮೀಸೆ ಕ್ಷೌರ ಮಾಡಿಸಿಕೊಳ್ಳಲು ಬಂದಿದ್ದಾರೆ ಎನ್ನುತ್ತಾರೆ ಸಲೂನ್ ಮಾಲಿಕ ನಾಣೇಶ್ 
ಅಭಿನಂದನ್ ಮರಳಿ ಭಾರತಕ್ಕೆ ಬಂದಿರುವುದು ನನಗೆ ಅತೀವ ಸಂತಸವಾಗಿದೆ. ನಾವು ಇಲ್ಲಿದ್ದೀವಿ ಎಂದರೆ ಅದಕ್ಕೆ ಗಡಿಯಲ್ಲಿ ಅಭಿನಂದನ್ ರಂತಹ ಯೋಧರು ಇರುವುದೇ ಕಾರಣ, ನಾನೂ ಅವರಂತೆಯೇ ಮೀಸೆಯನ್ನು ಟ್ರಿಮ್ ಮಾಡಿಸಿಕೊಂಡ ನಂತರ ಎಲ್ಲರ ಗಮನವೂ ನನ್ನಡೆಗೇ ಇರುತ್ತದೆ ಎನ್ನುತ್ತಾರೆ ಗ್ರಾಹಕ ತೇಜಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com