ಮೈಸೂರು ಮೂಲಕ ಕೊಚ್ಚಿ-ಹೈದರಾಬಾದ್ ವಿಮಾನ ಹಾರಾಟ ಆರಂಭಿಸಲಿರುವ ಅಲೈಯನ್ಸ್ ಏರ್

ಮೈಸೂರು ಮೂಲಕ ಕೊಚ್ಚಿ-ಹೈದರಾಬಾದ್ ಮಾರ್ಗದಲ್ಲಿ ಅಲೈಯನ್ಸ್ ಏರ್ ಸದ್ಯದಲ್ಲಿಯೇ ಹಾರಾಟ ...
ಅಲೈಯನ್ಸ್ ಏರ್
ಅಲೈಯನ್ಸ್ ಏರ್
Updated on
ಮೈಸೂರು: ಮೈಸೂರು ಮೂಲಕ ಕೊಚ್ಚಿ-ಹೈದರಾಬಾದ್ ಮಾರ್ಗದಲ್ಲಿ ಅಲೈಯನ್ಸ್ ಏರ್ ಸದ್ಯದಲ್ಲಿಯೇ ಹಾರಾಟ ನಡೆಸಲಿದೆ. ವಿಮಾನ ಪ್ರಮುಖ ಮೆಟ್ರೊ ನಗರಗಳಾದ ಕೊಚ್ಚಿ, ಹೈದರಾಬಾದ್ ನ್ನು ಮೈಸೂರು ಮೂಲಕ ಸಂಪರ್ಕಿಸಲಿದೆ. ಇದರಿಂದ ಪ್ರವಾಸೋದ್ಯಮ ಮತ್ತು ಹೂಡಿಕೆ ಕ್ಷೇತ್ರಗಳಿಗೆ ಉತ್ತೇಜನ ಸಿಗಬಹುದು ಎಂದು ಹೇಳಲಾಗುತ್ತಿದೆ.
ಅಲೈಯನ್ಸ್ ಏರ್ ನ ವಾಣಿಜ್ಯ ತಂಡ ಮೈಸೂರಿಗೆ ಭೇಟಿ ನೀಡಿ ವಿಮಾನಯಾನ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕೊಚ್ಚಿ ಮತ್ತು ಹೈದರಾಬಾದ್ ನಡುವಣ ವಿಮಾನ ಹಾರಟವನ್ನು ತಮ್ಮ ವ್ಯಾಪಾರ, ವಹಿವಾಟುಗಳಿಗೆ ಬಳಸಿಕೊಳ್ಳುವಂತೆ ಕೈಗಾರಿಕೋದ್ಯಮಿಗಳು, ಪ್ರವಾಸೋದ್ಯಮ, ಹೊಟೇಲ್ ಉದ್ಯಮಿಗಳು ಮತ್ತು ಇನ್ನೂ ಹಲವರೊಂದಿಗೆ ಮಾತುಕತೆ ನಡೆಸಿದರು. ಅಧಿಕಾರಿಗಳು ಭೇಟಿ ನೀಡಿದ್ದನ್ನು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಸಿ ಮಂಜುನಾಥ್ ದೃಢಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com