ಬೆಳಗಾವಿ: ಕಾರು ಮತ್ತು ಬೈಕ್ ಡಿಕ್ಕಿ ಹೊಡೆದ ನಂತರ ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೊರ್ಲ ರೋಡ್ ನಲ್ಲಿರುವ ಚಿಖಾಲೆ ಕ್ರಾಸ್ ನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ.
ಗಾಯಗೊಂಡವರನ್ನು ವಿಶ್ವನಾಥ್ ಗುಂಡಪ್ಪ ಬೊರಗಿ ಮತ್ತು ಸುನಿಲ್ ಮಲ್ಲಿಕಾರ್ಜುನ ಬೊರಗಿ ಎಂದು ಗುರುತಿಸಲಾಗಿದ್ದು ಇಬ್ಬರೂ ವಿಜಯಪುರ ಮೂಲದವರಾಗಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡವರು ಎನ್ ಫೀಲ್ಡ್ ಬುಲೆಟ್ ಬೈಕ್ ನ್ನು ಓಡಿಸುತ್ತಿದ್ದಾಗ ವಿರುದ್ಧ ಕಡೆಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ಇವರಿಬ್ಬರು ಗೋವಾ ಕಡೆಗೆ ಹೋಗುತ್ತಿದ್ದರು. ಎದುರುಗಡೆಯಿಂದ ಸಿತರಾಮ್ ಬಮ್ನೆ ಕಾರಿನಲ್ಲಿ ಒಬ್ಬನೇ ಬರುತ್ತಿದ್ದು ಅಪಘಾತದಲ್ಲಿ ಯಾವುದೇ ಅಪಾಯವಾಗದೆ ಬಚಾವಾಗಿದ್ದಾರೆ.