ಮಂಗಳೂರು: ಹತ್ಯೆಯಾಗಿದ್ದ ಮಹಿಳೆಯ ಗುರುತು ಪತ್ತೆ ಹಚ್ಚಿದ ಪೊಲೀಸರು

ಕೆಪಿಟಿ ಸಮೀಪ ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ.ಹತ್ಯೆಗೀಡಾದ ಮಹಿಳೆಯು ಸುಮಾರು 40 ವರ್ಷ ಪ್ರಾಯದ ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮಂಗಳೂರು:ಕೆಪಿಟಿ ಸಮೀಪ ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಗುರುತು ಪತ್ತೆಯಾಗಿದೆ.
ಹತ್ಯೆಗೀಡಾದ ಮಹಿಳೆಯು ಸುಮಾರು 40 ವರ್ಷ ಪ್ರಾಯದ ಅಮರ್ ಆಳ್ವಾ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ದೇಹವು ನಂತರೂ ಮತ್ತು ಕೆಪಿಟಿಯ ನಡುವಿನ ಹೆದ್ದಾರಿಯಲ್ಲಿ ಒಂದು ಗೋಣಿ ಚೀಲದಲ್ಲಿ ತುಂಬಿ ಇಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಕೊಲೆಯ ಹಿಂದಿನ ಕೆಲವು ವೈಯಕ್ತಿಕ ಕಾರಣಗಳನ್ನು ಸೂಚಿಸುತ್ತದೆ. ಮಹಿಳೆ ವಿಚ್ಚೇದಿತೆಯಾಗಿದ್ದು, ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಕದ್ರಿ ಪಾರ್ಕ್ ಸಮೀಪ ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅಂಗಡಿ ಪಕ್ಕ ಹೆಲ್ಮೆಟ್ ಇಟ್ಟು ಹೋಗಿದ್ದ. ಅದಾಗಿ ತುಸು ಹೊತ್ತಿನಲ್ಲೇ ಅಲ್ಲೇ ಸಮೀಪದಲ್ಲಿ ರಕ್ತಸಿಕ್ತವಾಗಿದ್ದ ಗೋಣಿಚೀಲವೊಂದು ಸಿಕ್ಕಿದ್ದು ಅದರಲ್ಲಿ ಹೆಲ್ಮೆಟ್ ಸಮೇತವಾಗಿದ್ದ ಅನಾಮಧೇಯ ಮಹಿಳೆಯ ರುಂಡ ಪತ್ತೆಯಾಗಿತ್ತು.
ಚೀಲದಲ್ಲಿ ಮಹಿಳೆಯ ರುಂಡ ಇರುವುದನ್ನು ಕಂಡ ಸ್ಥಳೀಯರು ಪೋಲೀಸರಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕಾಗಮಿಸಿದ ಪೋಲೀಸರು ಪರಿಶೀಲನೆ ನಡೆಸಿದ್ದರು.
ಇದಾಗಿ ಒಂದು ಗಟೆಯ ತರುವಾಯ ನಗರದ ಕೋಟಿ ಚೆನ್ನಯ್ಯ ವೃತ್ತ ಸಮೀಪ ರುಂಡವಿಲ್ಲದ ಮಹಿಳೆಯ ದೇಹದ ಭಾಗಗಳು ಪತ್ತೆಯಾಗಿತ್ತು.  ಪತ್ತೆಯಾಗಿರುವ ದೇಹ ಹಾಗೂ ಮಹಿಳೆಯ ತಲೆ ಒಂದೇ ವ್ಯಕ್ತಿಯದೆಂದು ಪೋಲೀಸರು ಶಂಕಿಸಿದ್ದರು.
ಕದ್ರಿ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com